ಆಂಟ್ರಿಕ್ಸ್ ಕಾರ್ಪೋರೇಷನ್ ಲಿ., ಸಂಸ್ಥೆಯ ಸಿಎಸ್‍ಆರ್ ಸಮಿತಿಯ ಅಧ್ಯಕ್ಷರಾದ ಡಾ.ಅಜಿತ್ ಕಲಘಟಗಿ ಹಾಗೂ ವ್ಯವಸ್ಥಾಪಕರು ಹಾಗೂ ಸಂಯೋಜಕರಾದ ರವೀಂದ್ರ ಎಚ್.ಎಸ್. ಈ ಸಂಸ್ಥೆಗೆ ಖುದ್ದು ಭೇಟಿ ನೀಡಿ ಕೊಡುಗೆ ನೀಡಿದ ಉಪಕರಣಗಳ ವಿವರದ ಪತ್ರವನ್ನು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಕಾರ್ಯಪ್ಪ ಕೆ.ಬಿ ಅವರಿಗೆ ಹಸ್ತಾಂತರಿಸಿ ತಮ್ಮ ಸಂಸ್ಥೆಯಿಂದ ನೀಡಿದ ವೈದ್ಯಕೀಯ ಉಪಕರಣಗಳನ್ನು ಸಾರ್ವಜನಿಕರ ಚಿಕಿತ್ಸೆಯಲ್ಲಿ ಪರಿಣಾಮಾಕಾರಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಸಂಸ್ಥೆಯ ಡೀನ್ ಹಾಗೂ ನಿರ್ದೇಶಕಾರದ ಡಾ.ಕೆ.ಬಿ.ಕಾರ್ಯಪ್ಪ ಅವರು ಆಂಟ್ರಿಕ್ಸ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ ರವರು ಸಂಸ್ಥೆಯ ವಿವಿಧ ವಿಭಾಗಗಳಿಗೆ ಚಿಕಿತ್ಸೆಗಾಗಿ ಒದಗಿಸಿದ ವೈದ್ಯಕೀಯ ಉಪಕರಣಗಳಾದ ಆನಸ್ಥೇಶಿಯಾ ವಕ್ರ್ಸ್ ಸ್ಟೇಶನ್, ಗ್ಲೋಕೋಮ ಸ್ಕ್ರೀನಿಂಗ್ ಚಿಕಿತ್ಸೆಗಾಗಿ ವಿಶುವಲ್ ಫೀಲ್ಡ್ ಅನಲೈಸರ್ ಉಪಕರಣ, ದಂತ ಚಿಕಿತ್ಸಾ ವಿಭಾಗಕ್ಕೆ ಎರಡು ಡೆಂಟಲ್ ಚೇರ್ ಮತ್ತು ಕ್ಷ-ಕಿರಣ ಯಂತ್ರ, ಮನೋವೈದ್ಯ ಶಾಸ್ತ್ರ ವಿಭಾಗಕ್ಕೆ ಇಸಿಟಿ ಉಪಕರಣ, ಮೆಡಿಸನ್ ವಿಭಾಗಕ್ಕೆ ಟಿಎಂಟಿ ಉಪಕರಣ, ಸ್ತ್ರೀ ಮತ್ತು ಪ್ರಸೂತಿ ವಿಭಾಗಕ್ಕೆ ಎನ್‍ಎಸ್‍ಟಿ ಉಪಕರಣ ಮತ್ತು ಶಸ್ತ್ರ್ರ ಚಿಕಿತ್ಸೆಗೆ ಬಳಸುವ ಹಾರ್ಮೋನಿಕ್ ಸ್ಕಾಲ್ಪಲ್ ಉಪಕರಣಗಳನ್ನು ಒದಗಿಸಲಾಗಿದ್ದು, ಆಸ್ಪತ್ರೆಗೆ ವಿವಿಧ ಚಿಕಿತ್ಸೆಗೆ ಆಗಮಿಸುವ ಸಾರ್ವಜನಿಕರಿಗೆ ಚಿಕಿತ್ಸೆಯನ್ನು ನೀಡಲು ಬಳಸಿಕೊಳ್ಳುವುದಾಗಿ ತಿಳಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network