ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಾದ ಶ್ರೀಯುತ ಭಂವರ್ ಸಿಂಗ್ ಮೀನಾ ರವರು ವಹಿಸಿಕೊಂಡಿದ್ದರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪನಾಧಿಕಾರಿ ಶ್ರೀಯುತ ಪೂಣಚ್ಚ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಮಕ್ಕಳ ಪ್ರದರ್ಶನ ನೋಡಿ ಮಾನ್ಯ ಮುಖ್ಯ ನಿರ್ವಹನಾಧಿಕಾರಿ ಕೊಡಗು ಜಿಲ್ಲಾ ಪಂಚಾಯತ್ ಇವರು ಪ್ರಶಂಸನೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ನೀನಾಸಂ ತಂಡದವರಿಂದ ಕ್ರಾಫ್ಟ್, ಸಮೂಹ ಗಾಯನ, ನೃತ್ಯ, ನಾಟಕ ಯೋಗ ಗಳನ್ನು ಮಕ್ಕಳಿಗೆ ಕಲಿಸಿ ಇಂದು ಪ್ರದರ್ಶಿಸಲಾಯಿತು.ಮತೊರ್ವ ಸಂಪನ್ಮೂಲ ವ್ಯಕ್ತಿ ಗಳಾದ ಶ್ರೀಯುತ ಲೋಕೇಶ್ ಕರಾಟೆ ಶಿಕ್ಷಕರು ಕರಾಟೆ ತರಬೇತಿ ನೀಡಿದ್ದು ಶಿಬಿರಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು.10 ದಿನಗಳ ಬೇಸಿಗೆ ಶಿಬಿರದಲ್ಲಿ ಜಿಲ್ಲಾ ಬಾಲಭವನದ ಸಂಯೋಜಕಾರದ ಹರೀಶ್ ಮತ್ತು ಪೂಜಾ ರವರ ನಡೆಸಿಕೊಟ್ಟಿದ್ದು 80 ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಶ್ರೀಮತಿ ಪ್ರಭಾವತಿ ನಿರೂಪಿಸಿದ್ದು ಸೂರಜ್ ವಂದಿಸಿದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network