ತೆರಾಲ್ ಗ್ರಾಮದಲ್ಲಿ ಸಿಎನ್‌ಸಿ ಯಿಂದ ಕೊಡವ ಜಾಗೃತಿ ಸಭೆ
ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮರೆನಾಡಿನ ತೆರಾಲ್ ಗ್ರಾಮದಲ್ಲಿ ‘ಮಂದ್ ಕಾನ್ ಕ್ಲೇವ್’ ನಡೆಯಿತು.
ತೇರಾಲ್ ಗ್ರಾಮದ ಮಂದ್ ನಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡವರ ಹಕ್ಕುಗಳ ಕುರಿತು ನಿರ್ಣಯ ಮಂಡಿಸಲಾಯಿತು.
ಕೊಡವ ಜನಾಂಗವನ್ನು ಈ ಮಣ್ಣಿನ ಆದಿಮ ವಿಶಿಷ್ಟ ಬುಡಕಟ್ಟು ಜನಾಂಗವೆಂದು ಗುರುತಿಸಬೇಕು, ಸಂವಿಧಾನದ 371 ನೇ ವಿಧಿಯಡಿಯಲ್ಲಿ ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ ನೀಡಬೇಕು, ಆರ್ಟಿಕಲ್ 25 ಮತ್ತು 26 ರ ಅಡಿಯಲ್ಲಿ ಕೊಡವ "ಧಾರ್ಮಿಕ ಸಂಸ್ಕಾರ ಗನ್" ಗೆ ಸಂವಿಧಾನದ ರಕ್ಷಣೆ ನೀಡಬೇಕು, ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಕೊಡವ ಭಾಷೆಯನ್ನು ಸೇರಿಸಬೇಕು, ಉಜ್ವಲವಾದ ಕೊಡವ ಜಾನಪದ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ಸರಕಾರದ ಗಮನ ಸೆಳೆಯಲು ನಿರ್ಣಯಿಸಲಾಯಿತು.
ಬೊಟ್ಟಂಗಡ ಸವಿತಾ ಗಿರೀಶ್, ಬೊಜ್ಜಂಗಡ ಚಂಪಾ ನಂದ, ಬೊಜ್ಜಂಗಡ ಅಂಚಲ್, ಬುಟ್ಟಿಯಂಡ ಲೀನಾ ಬೊಳ್ಳಮ್ಮ, ಬೊಟ್ಟಂಗಡ ಮುತ್ತಪ್ಪ, ಕಿರಿಯಮಾಡ ಶೆರಿನ್, ಬೊಳ್ಳೇರ ಮುತ್ತಣ್ಣ, ಮುಕಳಮಾಡ ವೀಟು, ಬೊಟ್ಟಂಗಡ ಪೆಮ್ಮಯ್ಯ, ಬೊಟ್ಟಂಗಡ ಮಹೇಶ್, ಬೊಟ್ಟಂಗಡ ಬೋಪಣ್ಣ, ಬೊಟ್ಟಂಗಡ ದೇವಯ್ಯ ಉಪಸ್ಥಿತರಿದ್ದು ಒಗ್ಗಟ್ಟು ಮತ್ತು ಶಾಂತಿಯುತ ಹೋರಾಟದ ಕುರಿತು ಪ್ರಮಾಣವಚನ ಸ್ವೀಕರಿಸಿದರು. ಬೊಟ್ಟಂಗಡ ಗಿರೀಶ್ ಸ್ವಾಗತಿಸಿ, ಬಲ್ಯಮೇದೇರಿರ ರಾಜಾ ವಂದಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network