Header Ads Widget

Responsive Advertisement

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಡಿಜಿಟಲ್ ಪುಸ್ತಕಗಳ ಲೋಕಾರ್ಪಣೆ


ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ 

ಬೇಳೂರು ಸುದರ್ಶನ ಅವರಿಂದ ಡಿಜಿಟಲ್ ಪುಸ್ತಕಗಳ ಲೋಕಾರ್ಪಣೆ

ಮಡಿಕೇರಿ: ಮುಂದಿನ ಜನಗಣತಿ ಸಂದರ್ಭದಲ್ಲಿ ಭಾಷೆ ಕಲಂನಲ್ಲಿ ಕನ್ನಡದ ಜೊತೆಗೆ ತಾವು ಮಾತನಾಡುವ ಮಾತೃ ಭಾಷೆಯನ್ನು ನಮೂದಿಸುವಂತಾಗಬೇಕು ಎಂದು ಸರ್ಕಾರದ ಇ-ಆಡಳಿತ ವಿಭಾಗದಲ್ಲಿ ಮುಖ್ಯಮಂತ್ರಿ ಅವರ ಸಲಹೆಗಾರರಾದ ಬೇಳೂರು ಸುದರ್ಶನ ಅವರು ಸಲಹೆ ಮಾಡಿದ್ದಾರೆ.  

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಡಿಜಿಟಲ್ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಆ್ಯಪ್ ಆಧಾರಿತ ಗಣತಿ ಮಾಡುವ ಬಗ್ಗೆ ಚಿಂತನೆಗಳು ನಡೆಯುತ್ತಿದೆ. ಆ ನಿಟ್ಟಿನಲ್ಲಿ ಭಾಷೆ ಕಲಂ ನಲ್ಲಿ ಅರೆಭಾಷೆಯನ್ನು ನಮೂದಿಸುವಂತಾಗಬೇಕು ಎಂದರು. 

ಹತ್ತು ಸಾವಿರಕ್ಕೂ ಹೆಚ್ಚು ಜನರು ಮಾತನಾಡುವ ಭಾಷೆಯನ್ನು ಎಲ್ಲಾ ಕ್ಷೇತ್ರಗಳಲ್ಲಿ ಪರಿಗಣಿÂಸುವಂತಾಗಬೇಕು. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಜೀವ ಮತ್ತು ಭಾಷಾ ವೈವಿಧ್ಯತೆ ಜೊತೆಗೆ ಆಧುನಿಕ ಯುಗದಲ್ಲಿ ಡಿಜಿಟಲ್ ವೈವಿಧ್ಯತೆಯನ್ನು ಬಳಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಇದರಿಂದ ಪುಸ್ತಕ ಓದುಗರಿಗೆ ಸಹಕಾರಿಯಾಗಲಿದೆ ಎಂದು ಇ-ಆಡಳಿತ ವಿಭಾಗದ ಮುಖ್ಯಮಂತ್ರಿ ಅವರ ಸಲಹೆಗಾರರು ತಿಳಿಸಿದರು.  

ರಾಷ್ಟ್ರದ ಈಶಾನ್ಯ ಹಾಗೂ ಪಶ್ಚಿಮ ಮತ್ತು ಪೂರ್ವ ಕರಾವಳಿ ಭಾಗದಲ್ಲಿ ಸಾಕಷ್ಟು ಭಾಷೆಗಳನ್ನು ಕಾಣಬಹುದು. ಆ ನಿಟ್ಟಿನಲ್ಲಿ ಭಾಷಾ ವೈವಿಧ್ಯತೆಯನ್ನು ಉಳಿಸಿಕೊಂಡು ಹೋಗಬೇಕು ಎಂದರು.             

ಅರೆಭಾಷೆ, ಕೊಡವ, ತುಳು, ಕೊಂಕಣಿ, ಬ್ಯಾರಿ ಹೀಗೆ ರಾಜ್ಯದಲ್ಲಿ ಐದು ಭಾಷಾ ಅಕಾಡೆಮಿಗಳನ್ನು ಸರಕಾರ ಸ್ಥಾಪಿಸಿರುವುದು ವಿಶೇಷವಾಗಿದೆ. ಆ ನಿಟ್ಟಿನಲ್ಲಿ ಅರೆಭಾಷೆಗೆ ಐಎಸ್‍ಒ ಕೋಡ್ ಪಡೆಯಲು ಮತ್ತಷ್ಟು ಶ್ರಮಿಸಬೇಕಿದೆ ಎಂದು ಬೇಳೂರು ಸುದರ್ಶನ ಅವರು ಹೇಳಿದರು.  

ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತಂದಿರುವ ಹಲವು ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿರುವುದು ಓದುಗರಿಗೆ ಸಕಾಲಿಕವಾಗಿದೆ. ಭಾಷಾ ದೃಷ್ಟಿಯಿಂದ ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದರು. 

ಕನ್ನಡ ಭಾಷಾ ಜಾಲತಾಣಗಳಲ್ಲಿ ಏಕರೂಪತೆ ಇರಬೇಕು ಎಂಬ ಉದ್ದೇಶದಿಂದ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಪುಸ್ತಕಗಳ ಡಿಜಿಟಲೀಕರಣದಿಂದ ಯಾರು ಎಲ್ಲಿ ಬೇಕಾದರು ತಮಗೆ ಬೇಕಾದ ಪುಸ್ತಕಗಳನ್ನು ಅಧ್ಯಯನ ಮಾಡಬಹುದಾಗಿದೆ ಎಂದು ಬೇಳೂರು ಸುದರ್ಶನ ಅವರು ವಿವರಿಸಿದರು.  

ಡಿಜಿಟಲೀಕರಣದ ಪ್ರಯೋಜನೆಗಳು ಪ್ರತಿಯೊಬ್ಬರಿಗೂ ಲಭ್ಯವಾಗಬೇಕು. ಸರ್ಕಾರದ ಕಣಜ.ಕಾಂ ನಲ್ಲಿ ಅರೆಭಾಷೆ ಅಕಾಡೆಮಿ ಪುಸ್ತಕಗಳು ದೊರೆಯುವಂತಾಗಬೇಕು. ಪ್ರಾಥಮಿಕ ಹಂತದಲ್ಲಿಯೆ ಮಾತೃ ಭಾಷೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಇದರಿಂದ ನಾಡಿನ ಭಾಷೆ ಉಳಿಯಲು ಸಾಧ್ಯ ಎಂದರು. 

ವಿಶ್ವಸಂಸ್ಥೆಯು 2019 ರಲ್ಲಿ ಅಂತರ ರಾಷ್ಟ್ರೀಯ ದೇಶಿ ಭಾಷಾ ವರ್ಷವನ್ನಾಗಿ ಆಚರಿಸಿತು. ಆ ನಿಟ್ಟಿನಲ್ಲಿ ವಿಶ್ವದ ಹಲವು ಭಾಗಗಳಲ್ಲಿ ಸಮುದಾಯ ಆಧಾರಿತ ಭಾಷೆಗಳು ಎಲ್ಲೆಡೆ ಇವೆ ಎಂದರು. 

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರು ಮಾತನಾಡಿ ಅರೆಭಾಷೆ ಅಕಾಡೆಮಿಯಿಂದ ಹೊರತಂದಿರುವ ಪುಸ್ತಕಗಳು ಎಲ್ಲರಿಗೂ ತಲುಪುವಂತಾಗುವ ನಿಟ್ಟಿನಲ್ಲಿ ಪುಸ್ತಕಗಳ ಡಿಜಿಟಲೀಕರಣ ಮಾಡಲಾಗಿದೆ.  ಪುಸ್ತಕಗಳು ಸಿಗುತ್ತಿಲ್ಲ ಎಂಬ ಭಾವನೆ ಯಾರಲ್ಲೂ ಬರಬಾರದು ಎಂಬ ಉದ್ದೇಶದಿಂದ ಆಧುನಿಕತೆಗೆ ಒಗ್ಗಿಕೊಂಡು ಅಕಾಡೆಮಿಯ ಹಲವು ಪುಸ್ತಕಗಳ ಡಿಜಿಟಲೀಕರಣ ಮಾಡಲಾಗಿದೆ ಎಂದರು.

ಮುಂದಿನ 3 ತಿಂಗಳಲ್ಲಿ ಶಬ್ದಕೋಶ/ನಿಘಂಟು, ಪಾರಂಪರಿಕ ವಸ್ತುಕೋಶ ಸೇರಿದಂತೆ ಇತರ ಎಂಟು ಪುಸ್ತಕಗಳು ಬಿಡುಗಡೆಗೆ ಬಾಕಿ ಇದೆ.  ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದೆ ಎಂದು ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ಶತಮಾನಗಳ ಹಿಂದೆ ತಾಳೆಗರಿಯಲ್ಲಿ ಬರೆದು ಓದಲಾಗುತ್ತಿದ್ದು, ಬಳಿಕ ಕಾಗದದಲ್ಲಿ ಮುದ್ರಣ ಮಾಡಿ ಓದಲಾಗುತ್ತಿತ್ತು, ಈಗ ಆಧುನಿಕ ಜಗತ್ತಿನ ಶರವೇಗದ ಬದುಕಿನಲ್ಲಿ ಡಿಜಿಟಲ್ ಮಾಧ್ಯಮ ಬಳಸಿಕೊಳ್ಳಲಾಗುತ್ತಿದೆ ಎಂದರು. 

 ಪುಸ್ತಕವು ಪ್ರತಿಯೊಬ್ಬರ ಮಿತ್ರನಾಗಿದ್ದು, ಮಾಹಿತಿಯ ಭಂಡಾರವಾಗಿದೆ, ಭಾಷಾ ಮಾಧ್ಯಮದ ಜೊತೆಗೆ ಸಮಾಜದ ಸಂಸ್ಕøತಿ ಆಚಾರ-ವಿಚಾರಗಳನ್ನು ಒಳಗೊಂಡ ಸಮ್ಮಿಲನವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರು ಮಾತನಾಡಿ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಕೊಂಡು ಓದುವಂತಾಗಬೇಕು. ಇಲ್ಲದಿದ್ದಲ್ಲಿ ಡಿಜಿಟಲ್ ಮಾಧ್ಯವನ್ನಾದರೂ ಬಳಸಿಕೊಂಡು ಭಾಷೆ, ಸಂಸ್ಕøತಿ ಮತ್ತು ಸಾಹಿತ್ಯ ಉಳಿಸಿ ಬೆಳೆಸುವಂತಾಗಬೇಕು ಅವರು ಸಲಹೆ ಮಾಡಿದರು. 

ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ತೋಟಂಬೈಲು ಮನೋಹರ್ ಅವರು ಮಾತನಾಡಿ ಅರೆಭಾಷೆಯನ್ನು ಕನ್ನಡ ಸೇರಿದಂತೆ ಇತರೆ ಭಾಷೆಗಳ ಗುಂಪಿಗೆ ಸೇರ್ಪಡೆ ಮಾಡುವ ನಿಟ್ಟಿನಲಿ ಎಲ್ಲರು ಶ್ರಮಿಸಬೇಕಿದೆ ಎಂದರು, 

ಭವಿಷ್ಯದಲ್ಲಿ ಅರೆಭಾಷೆ ಅಕಾಡೆಮಿಯಿಂದ ಹೊರತರುವ ಇನ್ನಷ್ಟು ಪುಸ್ತಕಗಳನ್ನು ಡಿಜಿಟಲೀಕರಣ ಮಾಡುವಂತಾಗಬೇಕು ಅರೆಭಾಷೆಗೆ ಮತ್ತಷ್ಟು ಪ್ರೋತ್ಸಾಹ ಸಿಗುವಂತಾಗಬೇಕು. ಮೈಸೂರಿನಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಅವಕಾಶ ಮಾಡಬೇಕು ಎಂದರು.   

ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಡಾ.ಕೂಡಕಂಡಿ ದಯಾನಂದ, ಭರತೇಶ್ ಅಲಸಂಡೆಮಜಲು, ರಿಜಿಸ್ಟ್ರಾರ್ ಚಿನ್ನಸ್ವಾಮಿ ಇತರರು ಇದ್ದರು. 

ಪ್ರೇಮ ರಾಘವಯ್ಯ ಪ್ರಾರ್ಥಿಸಿದರು, ರಿಜಿಸ್ಟ್ರಾರ್ ಚಿನ್ನಸ್ವಾಮಿ ಸ್ವಾಗತಿಸಿದರು, ಧನಂಜಯ ಅಗೋಳಿಕಜೆ ನಿರೂಪಿಸಿದರು, ಭರತೇಶ ಅಲಸಂಡೆಮಜಲು ವಂದಿಸಿದರು.