Ad Code

Responsive Advertisement

ರಾಫ್ಟ್ ಮತ್ತು ರಾಫ್ಟ್ ಗೈಡ್‍ಗಳ ಪರಿಶೀಲನೆ


ರಾಫ್ಟ್ ಮತ್ತು ರಾಫ್ಟ್ ಗೈಡ್‍ಗಳ ಪರಿಶೀಲನೆ

ಮಡಿಕೇರಿ: ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರಿವರ್ ರಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯ ನಿರ್ಣಯದಂತೆ ಜೂನ್ 23 ಮತ್ತು 24 ರಂದು ‘ರಿವರ್ ರಾಫ್ಟಿಂಗ್ ತಾಂತ್ರಿಕ ಉಪ ಸಮಿತಿ’ ಹಾಗೂ ಜನರಲ್ ತಿಮ್ಮಯ್ಯ ರಾಷ್ಟೀಯ ಸಾಹಸ ಅಕಾಡೆಮಿ ಇವರ ತಾಂತ್ರಿಕ ಪರಿಣಿತರ ಉಪಸ್ಥಿತಿಯಲ್ಲಿ ದುಬಾರೆ ಮತ್ತು ಬರ್ಪೋಳೆ ರಾಫ್ಟಿಂಗ್ ತಾಣಗಳಲ್ಲಿ ರಾಫ್ಟ್ ಮತ್ತು ರಾಫ್ಟ್ ಗೈಡ್ ಪರಿಶೀಲನೆ ನಡೆಯಿತು.  

ದುಬಾರೆಯಲ್ಲಿ 69 ರಾಫ್ಟ್ ಮತ್ತು 60 ಗೈಡ್, ಬರ್ಪೋಳೆಯಲ್ಲಿ 09 ರಾಫ್ಟ್ ಮತ್ತು 10 ಗೈಡ್ ನಿಗಧಿತ ಮಾನದಂಡಗಳನ್ನು ಪೂರೈಸಿರುವ ರಾಫ್ಟ್ ಮತ್ತು ರಾಫ್ಟ್ ಗೈಡ್‍ಗಳಿಗೆ ಜನರಲ್ ತಿಮ್ಮಯ್ಯ ರಾಷ್ಟೀಯ ಸಾಹಸ ಅಕಾಡೆಮಿ ವತಿಯಿಂದ ಪ್ರಮಾಣಪತ್ರ ಒದಗಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಡಾ.ಯತೀಶ್ ಉಳ್ಳಾಲ್ ಅವರು ತಿಳಿದ್ದಾರೆ.