Ad Code

Responsive Advertisement

ಹಾಕಿ ಕ್ರೀಡಾಕೂಟಕ್ಕೆ ಎಂಟು ಮಂದಿ ಆಯ್ಕೆ


ಹಾಕಿ ಕ್ರೀಡಾಕೂಟಕ್ಕೆ ಎಂಟು ಮಂದಿ ಆಯ್ಕೆ

ಮಡಿಕೇರಿ: ಭೋಪಾಲ್‍ನಲ್ಲಿ ನಡೆದ ರಾಷ್ಟ್ರೀಯ ನಾಗರಿಕ ಸೇವಾ ಹಾಕಿ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಎಂಟು ಮಂದಿ ಆಯ್ಕೆ ಆಗಿದ್ದಾರೆ. ಕಂದಾಯ ಇಲಾಖೆಯ ಪ್ರಕಾಶ್ ಪಳಗಂಪ್ಪ, ಪಶುಸಂಗೋಪನೆ ಇಲಾಖೆಯ ರಮೇಶ್, ಶಿಕ್ಷಣ ಇಲಾಖೆಯ ಲೋಕೇಶ್ ಆರ್.ಡಿ, ಮಹೇಶ್ ಆರ್.ಡಿ., ಕಂದಾಯ ಇಲಾಖೆಯ ಜಾಗೃತ್, ಮೋನ್ ಮೊಣ್ಣಪ್ಪ, ಸುಬ್ಬಯ್ಯ, ಮಾಚಯ್ಯ, ಆರೋಗ್ಯ ಇಲಾಖೆಯ ನವೀನ್ ಕುಮಾರ್, ತಂಡದ ಕೋಚ್ ಆಗಿ ಶಿಕ್ಷಣ ಇಲಾಖೆಯ ಪೂರ್ಣೇಶ್ ಅವರು ಜೂನ್, 20 ರವರೆಗೆ ಭೂಪಾಲ್‍ನಲ್ಲಿ ನಡೆದ ರಾಷ್ಟ್ರ ಮಟ್ಟದ ನಾಗರಿಕ ಸೇವಾ ಹಾಕಿ ಪಂದ್ಯದಲ್ಲಿ ಭಾಗವಹಿಸಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಅಧ್ಯಕ್ಷರಾದ ಪೊನ್ನಚ್ಚನ ಶ್ರೀನಿವಾಸ್ ಅವರು ತಿಳಿಸಿದ್ದಾರೆ.