Header Ads Widget

Responsive Advertisement

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬ್ಯಾಡಗೊಟ್ಟ ಗ್ರಾಮದಲ್ಲಿ ಅಭಿನಂದನಾ ಸಭೆ



ಸೋಮವಾರಪೇಟೆ ತಾಲೂಕು ಬ್ಯಾಡಗೊಟ್ಟ ಗ್ರಾಮದ ವನವಾಸಿ ಬಂಧುಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬ್ಯಾಡಗೊಟ್ಟ ಗ್ರಾಮದಲ್ಲಿ ಶುಭಾಶಯ ಕೋರಿ ಅಭಿನಂದನಾ ಪತ್ರ ಕಳುಹಿಸಲು ಸಭೆ ನಡೆಸಿದ  ಸಂದರ್ಭದ ಕಾರ್ಯಕ್ರಮ. 

ಈ ಕಾರ್ಯಕ್ರಮದಲ್ಲಿ ಊರಿನ ಪ್ರಮುಖರಾದ ಮೀಸೆ ಮುತ್ತಣ್ಣನವರು, ಸಿದ್ದಣ್ಣ, ಮನು, ಮಂಜೇಶ, ಕೃಷ್ಣ, ಬಸವಣ್ಣ ಹಾಗೂ ವನವಾಸಿ ಕಲ್ಯಾಣ  ಆಶ್ರಮದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್ ರವರು ಉಪಸ್ಥಿತರಿದ್ದರು.


ವನವಾಸಿ ಕಲ್ಯಾಣ ಆಶ್ರಮದ ಬಗ್ಗೆ ಒಂದಿಷ್ಟು ಮಾಹಿತಿ : 

ವನವಾಸಿ ಕಲ್ಯಾಣ ಆಶ್ರಮವು ಭಾರತದ ಬುಡಕಟ್ಟು ಜನ ಮತ್ತು ಗಿರಿಜನರ (ವನವಾಸಿಗಳು) ಸಾಮಾಜಿಕ ಮತ್ತು ಆರ್ಥಿಕ ಏಳಿಗೆ ಮತ್ತು ಅಭಿವೃದ್ಡಿಗಾಗಿ ಶ್ರಮಿಸುತ್ತಿರುವ ಅಖಿಲ ಭಾರತ ಮಟ್ಟದ ಸೇವಾಸಂಸ್ಥೆಯಾಗಿದೆ. 

ಆಶ್ರಮವು ದೂರದ ವನವಾಸಿ ಗ್ರಾಮ/ಹಾಡಿಗಳಲ್ಲಿ ತನ್ನ ಸೇವಾ ಕಾರ್ಯಗಳ ಮೂಲಕ ಹಾಗೂ ಹಲವು ಹತ್ತು ವೈವಿದ್ಯಮಯ ಕಾರ್ಯಕ್ರಮಗಳ ಮೂಲಕ ವನವಾಸಿ ಬಂಧುಗಳು ಸ್ವಾವಲಂಬಿ ಮತ್ತು ಸ್ವಾಭಿಮಾನಿಗಳಾಗಲು ಶ್ರಮಿಸುತ್ತಿದೆ. ಸಂಸ್ಥೆಯ ಕೆಲಸವು ರಾಷ್ಟ್ರವ್ಯಾಪಿ ಮಟ್ಟದಲ್ಲಿ ನಡೆಯುತ್ತಿದೆ.

2002ರಲ್ಲಿ ವಾರಾಣಸಿಯಲ್ಲಿ ನಡೆದ ವಾರ್ಷಿಕ ಸಮಾವೇಶದಲ್ಲಿ ಆಶ್ರಮದ ರಾಷ್ಟ್ರೀಯ ಆಧ್ಯಕ್ಷರು ಮಾಧ್ಯಮಗಳಿಗೆ ತಿಳಿಸಿದ ಪ್ರಕಾರ ಇದು ದೇಶದ 312 ಜಿಲ್ಲೆಗಳಲ್ಲಿ ವನವಾಸಿಗಳ ಕ್ಷೇಮಾಭಿವೃದ್ಢಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. 1203 ಪೂರ್ಣಾವಧಿ ಕಾರ್ಯಕರ್ತರ ಮೇಲ್ವಿಚಾರಣೆಯಲ್ಲಿ ಈ ಮಹತ್ತರ ಕೆಲಸ ನಡೆಯುತ್ತಿದೆ. 

ಕೃಷಿ, ಆರೋಗ್ಯ, ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ಷೇಮಾಭಿವೃದ್ಢಿಯೇ ಈ ಯೋಜನೆಗಳ ಉದ್ದೇಶವಾಗಿದೆ. ವನವಾಸಿಗಳು ವಾಸವಾಗಿರುವ ಬಹುತೇಕ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆ, ವಸತಿ ಸಹಿತ ಶಾಲೆ, ವಿದ್ಯಾರ್ಥಿ ನಿಲಯ, ಗ್ರಂಥಾಲಯ ಮತ್ತು ಆರೋಗ್ಯ ಕೇಂದ್ರಗಳನ್ನು ಆಶ್ರಮವು ನಡೆಸುತ್ತದೆ. ವಾರ್ಷಿಕವಾಗಿ ನಡೆಯುವ ಹಲವಾರು ಆಯೋಜನೆಗಳಲ್ಲಿ ವೈದ್ಯಕೀಯ ಶಿಬಿರ, ಪಾರಂಪರಿಕ ಕ್ರೀಡೆಗಳ ಸ್ಪರ್ದಾಕೂಟ, ಮತ್ತು ಬುಡಕಟ್ಟು ಜನರ ಹಬ್ಬಗಳ ಆಚರಣೆಗಳು ಮುಖ್ಯವಾದವುಗಳು. ಕರ್ನಾಟಕದಲ್ಲಿ 2015ನೇ ಇಸವಿಯಲ್ಲಿ ವನವಾಸಿ ಕಲ್ಯಾಣ ಆಶ್ರಮ ರಾಜ್ಯದ 10 ಜಿಲ್ಲೆಗಳ 21 ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.