ಕೊಡವ ರೈಡರ್ಸ್ ಕ್ಲಬ್ ವತಿಯಿಂದ ಪೊನ್ನಂಪೇಟೆ ಸಮೀಪದ ಕಿರಗೂರು ದೇವರ ಕಾಡಿನಲ್ಲಿ ಕಾಡುಗಿಡಗಳು ಹಾಗೂ ವಿವಿಧ ಜಾತಿಯ ಕಾಡು ಹಣ್ಣು ಗಿಡಗಳನ್ನು ನೆಡುವ ಕಾರ್ಯಕ್ರಮ ಇದೇ ಶನಿವಾರ ಆ-6ರಂದು ಬೆಳಿಗ್ಗೆ 10-30 ಗಂಟೆಗೆ ನಡೆಯಲ್ಲಿದೆ ಎಂದು ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅವರು ಕಳೆದ 4 ವರ್ಷಗಳಿಂದ ನಿರಂತರವಾಗಿ ಜಿಲ್ಲೆಯ ವಿವಿಧೆಡೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಳೆಗಾಲದ ಸಂದರ್ಭದಲ್ಲಿ ಗಿಡ ನೆಡುವುದರೊಂದಿಗೆ ಬೇಸಿಗೆಯಲ್ಲಿ ಕೂಡ ಅದರ ಪೋಷಣೆಯನ್ನು ಮಾಡುತ್ತಿದ್ದೇವೆ. ಆಯಾಯ ಊರಿನವರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ, ಈ ಬಾರಿ ಪೊನ್ನಂಪೇಟೆ ಸಮೀಪದ ಕಿರಗೂರು ದೇವರ ಕಾಡಿನಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಇದೇ ಶನಿವಾರ ಆ-6ರಂದು ಬೆಳಿಗ್ಗೆ 10-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಸುಮಾರು 500 ಗಿಡಗಳನ್ನು ನೆಡುವ ಯೋಜನೆ ಇದೆ, ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ವಿದ್ಯುತ್ ನಿರೀಕ್ಷಕರಾದ ತೀತೀರ ರೋಶನ್ ಅಪ್ಪಚ್ಚು, ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಇಟ್ಟೀರ ಬಿದ್ದಪ್ಪ ಹಾಗೂ ಕಮಲಾಕ್ಷಿ ಬಿದ್ದಪ್ಪ, ಖ್ಯಾತ ಅಂತರರಾಷ್ಟ್ರೀಯ ರ್ಯಾಲಿ ಪಟು ಲೋಹಿತ್ ಅರಸ್ ಸೇರಿದಂತೆ ಇತರರು ಉಪಸ್ಥಿತರಿರುವರು ಎಂದು ಅವರು ಮಾಹಿತಿ ನೀಡಿದ್ದಾರೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network