Header Ads Widget

ಸರ್ಚ್ ಕೂರ್ಗ್ ಮೀಡಿಯ

ಹೊನ್ನಮ್ಮ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಶಾಸಕರು


ಹೊನ್ನಮ್ಮ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಶಾಸಕರು

ಮಡಿಕೇರಿ ಆ.30: ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಇತಿಹಾಸ ಪ್ರಸಿದ್ದ ದೊಡ್ಡಮಳ್ತೆಯ ಹೊನ್ನಮ್ಮ ಕೆರೆಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಬಳಿಕ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಹೊನ್ನಮ್ಮನ ಕೆರೆಯೂ ಚರಿತ್ರೆಯ ಪುಟಗಳಿಗೆ ಸೇರಿದೆ. ಬಾಲ್ಯದಿಂದಲೂ ಹೊನ್ನಮ್ಮನ ಕೆರೆ ಬಗ್ಗೆ ಭಕ್ತಿಭಾವ ಹೊಂದಲಾಗಿದೆ ಎಂದರು. 

ಹೊನ್ನಮ್ಮನ ಕೆರೆ ಮತ್ತು ದೇವಸ್ಥಾನದ ಅಭಿವೃದ್ಧಿಗೆ ರೂ.1 ಕೋಟಿ ಮೀಸಲಿಟ್ಟಿದ್ದೆ. ಪ್ರಸ್ತುತ ಹೊನ್ನಮ್ಮನ ಕೆರೆಯು ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿದೆ. ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯಗಳನ್ನು ಪಡೆದು ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಕೆಲಸ ಮಾಡಲಾಗುತ್ತದೆ ಎಂದರು.