Header Ads Widget

Responsive Advertisement

ಗುಡ್ಡಗಾಡು ಓಟ ಸ್ಪರ್ಧೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಚಾಲನೆ


ಗುಡ್ಡಗಾಡು ಓಟ ಸ್ಪರ್ಧೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಚಾಲನೆ

ಮಡಿಕೇರಿ ಆ.23: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಗುಡ್ಡಗಾಡು ಓಟಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಗುಡ್ಡಗಾಡು ಓಟವು ವಿಶಿಷ್ಟವಾಗಿದ್ದು, ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತಾಗಬೇಕು ಎಂದು ಹೇಳಿದರು.

ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಸದಾ ಚಟುವಟಿಕೆಯಿಂದ ಇರಬಹುದಾಗಿದೆ. ಇದರಿಂದ ಮಾನಸಿಕ ಒತ್ತಡ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

14 ವರ್ಷದೊಳಗಿನ ಸುಮಾರು 70 ಮಂದಿ ಗುಡ್ಡಗಾಡು ಕ್ರೀಡಾಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಕಾಲೇಜು ರಸ್ತೆ ಮಾರ್ಗ ಓಂಕಾರೇಶ್ವರ ದೇವಸ್ಥಾನ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಿದರು. 

ಹಾಗೆಯೇ 14 ವರ್ಷ ಮೇಲ್ಪಟ್ಟು 40 ಮಂದಿ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇವರು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಿಂದ ಹೊರಟು ಚೈನ್‍ಗೇಟ್ ಮೂಲಕ ಸಂಪಿಗೆಕಟ್ಟೆ, ಕನ್ನಂಡಬಾಣೆ ಮೂಲಕ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ತಲುಪಿದರು.

14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಎಚ್.ಪಿ.ಶಾಂಭವಿ(ಪ್ರಥಮ), ಎಂ.ಎಸ್.ಕೃತಿಕ(ದ್ವಿತೀಯ), ಎಚ್.ಎಂ.ಲೋಲಾಕ್ಷಿ(ತೃತೀಯ), ಬಿ.ಜೆ.ಅಂಚಲ್(4ನೇ ಸ್ಥಾನ), ಬಿ.ಡಿ.ಚಸ್ಮಿತ(5ನೇ ಸ್ಥಾನ), ತಾನಿಯ(6ನೇ ಸ್ಥಾನ) ಬಹುಮಾನ ಪಡೆದಿದ್ದಾರೆ. 

14 ವರ್ಷದೊಳಗಿನ 1 ಕಿ.ಮೀ. ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ದೇವ್‍ಮಲ್ಲ ಮೇಥಿ(ಪ್ರಥಮ), ಎಸ್.ಡಿ.ಗವಿನ್ (ದ್ವಿತೀಯ), ಸಿ.ಜಿ.ವಿಬಿಸ್(ತೃತೀಯ), ಎಸ್.ಡಿ.ದಿಗಂತ್(4ನೇ ಸ್ಥಾನ), ಕೆ.ಎಲ್.ಚಿರಾಗ್(5ನೇ ಸ್ಥಾನ), ಎಸ್.ಪಿ.ಬೋಪಣ್ಣ(6ನೇ ಸ್ಥಾನ) ಪಡೆದಿದ್ದಾರೆ.

ಪುರುಷರ ವಿಭಾಗದಲ್ಲಿ 5 ಕಿ.ಮೀ ಓಟ ಸ್ಪರ್ಧೆಯಲ್ಲಿ ಕೊಡ್ಲಿಪೇಟೆಯ ಬಿ.ಪಿ.ಮನು(ಪ್ರಥಮ), ಪಾಲೂರು ಸೂದನ ಎಸ್.ಡಾಲಿ(ದ್ವಿತೀಯ), ಬೆಟ್ಟತ್ತೂರು ಎಂ.ಎಂ.ಪವನ್(ತೃತೀಯ), ಭಾಗಮಂಡಲದ ಕೆ.ಕೆ.ಯತಿನ್(4ನೇ ಸ್ಥಾನ), ಸೂರ್ಲಬ್ಬಿಯ ಐ.ಎಲ್.ಸುಬ್ಬಯ್ಯ(5ನೇ ಸ್ಥಾನ), ಬೆಟ್ಟಗೇರಿಯ ಪಿ.ಜಿ.ಲತೇಶ್(6ನೇ ಸ್ಥಾನ) ಪಡೆದಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ, ಕ್ರೀಡಾ ತರಬೇತಿದಾರರಾದ ಆಂಥೋಣಿ ಡಿಸೋಜ, ಬಿಂದಿಯಾ, ಕೆ.ಮಹಾಬಲ ಇತರರು ಇದ್ದರು.  

      ಆಗಸ್ಟ್, 24 ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಷಟಲ್ ಬ್ಯಾಡ್ಮಿಂನ್  ಪಂದ್ಯಾವಳಿ ಹಾಗೂ ಈಜು ಸ್ಪರ್ದೆಯನ್ನು ಜನರಲ್ ತಿಮ್ಮಯ್ಯ ಒಳಾಗಂಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಜಿಲ್ಲೆಯ  ಕ್ರೀಡಾ ಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ. 08272-228985, 9482733599 ನ್ನು ಸಂಪರ್ಕಿಸಬಹುದು.