Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಪ್ಪಂಗಳದಲ್ಲಿ ಇತ್ತೀಚೆಗೆ ನಡೆದ ಏಲಕ್ಕಿಯ ಕ್ಷೇತ್ರೋತ್ಸವ


ಅಪ್ಪಂಗಳದಲ್ಲಿ ಇತ್ತೀಚೆಗೆ ನಡೆದ  ಏಲಕ್ಕಿಯ ಕ್ಷೇತ್ರೋತ್ಸವ

ಮಡಿಕೇರಿ ಆ.23: ಐಸಿಎಆರ್-ಐಐಎಸ್‍ಆರ್ ಪ್ರಾದೇಶಿಕ ಕೇಂದ್ರ, ಅಪ್ಪಂಗಳದಲ್ಲಿ ಇತ್ತೀಚೆಗೆ  ಏಲಕ್ಕಿಯ ಕ್ಷೇತ್ರೋತ್ಸವ ನಡೆಯಿತು. 

       ಕಾರ್ಯಕ್ರಮವನ್ನು ಐಸಿಎಆರ್ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಸಕಲೇಶಪುರದ ಕಳಲೆ ಪ್ರಗತಿಪರ ರೈತರಾದ ಕೆ.ಜಿ.ರಾಮಚಂದ್ರ ಉದ್ಘಾಟಿಸಿ ಕೃಷಿಯಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು. 

      ವಿಟ್ಲ, ಸಿಪಿಸಿಆರ್‍ಐ., ನಿವೃತ್ತ ಮುಖ್ಯಸ್ಥರಾದ ಡಾ.ಕೆ.ಎಸ್.ಆನಂದ ಅವರು ಬಹುವಾರ್ಷಿಕ ಬೆಳೆಗಳಲ್ಲಿ ಸುಧಾರಿತ ತಳಿಗಳ ಆಯ್ಕೆ ಮತ್ತು ಮಿಶ್ರ ಬೆಳೆಯ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಿದರು.

      ಸಕಲೇಶಪುರದ ಕಳಲೆ ಪ್ರಗತಿಪರ ರೈತರಾದ ಸುಧೀಪ್ ಅವರು ಏಲಕ್ಕಿ ಮತ್ತು ಇನ್ನಿತರ ತೋಟಗಾರಿಕಾ ಬೆಳೆಗಳಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು. 

      ಐಸಿಎಆರ್-ಐಐಎಸ್‍ಆರ್ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಜೆ.ಅಂಕೇಗೌಡ ಅವರು ಮಾತನಾಡಿ ಏಲಕ್ಕಿ ಬೆಳೆಯ ಸುಸ್ಥಿರ ಉತ್ಪಾದನೆಯ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನಿ ಡಾ.ಎಚ್.ಜೆ. ಅಕ್ಷಿತ ಅವರು ವೈಜ್ಞಾನಿಕ ಏಲಕ್ಕಿ ಕೃಷಿಯ ಬಗ್ಗೆ ಮಾಹಿತಿ ನೀಡಿದರು. 

      ರೈತರು ಕೇಂದ್ರದ ಪ್ರಾಯೋಗಿಕ ತಾಕುಗಳಿಗೆ ಭೇಟಿ ನೀಡಿದರು ಮತ್ತು ಕೇಂದ್ರದ ವಿಜ್ಞಾನಿಗಳು ರೈತರೊಂದಿಗೆ ಏಲಕ್ಕಿಯ ವಿವಿಧ ತಳಿಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಸುಮಾರು 40 ಬೆಳೆಗಾರರು ಪಾಲ್ಗೊಂಡಿದ್ದರು.