Header Ads Widget

ಸರ್ಚ್ ಕೂರ್ಗ್ ಮೀಡಿಯ

ಎಮರ್ಜೆನ್ಸಿ ಕೇರ್ ಮತ್ತು ಲೈಪ್ ಸಪೋರ್ಟ್ ತರಬೇತಿಗೆ ಚಾಲನೆ


ಎಮರ್ಜೆನ್ಸಿ ಕೇರ್ ಮತ್ತು ಲೈಪ್ ಸಪೋರ್ಟ್ ತರಬೇತಿಗೆ ಚಾಲನೆ

ಮಡಿಕೇರಿ ಆ.23: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಎಮರ್ಜೆನ್ಸಿ ಕೇರ್ ಮತ್ತು ಲೈಪ್ ಸಪೋರ್ಟ್ ಎಂಬ ತರಬೇತಿ ಕಾರ್ಯಕ್ರಮವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಹಾಗೂ ಜೀವ ರಕ್ಷ ಸಂಸ್ಥೆಯ ಅಡಿಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಕೊಠಡಿಯಲ್ಲಿ ನಡೆಯಿತು.  

ಸಂಸ್ಥೆಯ 150 ಗೃಹ ವೈದ್ಯರುಗಳನ್ನು 30 ಜನರ ತಂಡವಾಗಿ ವಿಂಗಡಿಸಿ ಐದು ವಾರ ತರಭೇತಿಯನ್ನು ನೀಡಲಾಯಿತು.  30 ಜನರ ಗೃಹ ವೈದ್ಯರ ತಂಡಕ್ಕೆ 10 ವೈದ್ಯರುಗಳು ಬೋಧಕರಾಗಿ ಕಾರ್ಯ ನಿರ್ವಹಿಸಿದರು. ತರಬೇತಿಯು 4 ದಿನಗಳ ಅವಧಿಯಲ್ಲಿ ಆಯೋಜಿಸಲಾಗಿದ್ದು ಮೊದಲ ಮೂರು ದಿನಗಳಲ್ಲಿ ತುರ್ತು ಚಿಕಿತ್ಸಾ  ಕ್ರಮಗಳನ್ನು ಬೋಧಿಸಲಾಯಿತು.  

ಅಪಘಾತದ ಸಮಯದಲ್ಲಿ ಆಕಸ್ಮಿಕ ಹೃದಯಾಘಾತ ಉಸಿರು ಗಟ್ಟುವಿಕೆ ರಕ್ತಸ್ರಾವ, ಹಾವು ಕಡಿತ ಪ್ರಸವ ನಂತರದ ರಕ್ತಸ್ರಾವ ಮುಂತಾದ ತುರ್ತು ಪರಿಸ್ಥಿತಿಯ ಚಿಕಿತ್ಸಾ ಕ್ರಮಗಳ ಕುರಿತು ತರಭೇತಿಯನ್ನು ನೀಡಲಾಯಿತು. ತರಬೇತಿಯ ನಡುವೆ ತುರ್ತು  ಪರಿಸ್ಥಿತಿಗಳ ಪ್ರಹಸನದ (ನಾಟಕ) ಮೂಲಕ ವಿಷಯವನ್ನು ತಿಳಿಹೇಳಲಾಯಿತು ಹಾಗೂ 4ನೇ ದಿನದಂದು 3 ದಿನಗಳ ತರಬೇತಿಯ ಕುರಿತು ಪರೀಕ್ಷೆ ನಡೆಸಲಾಯಿತು.

ವೈದ್ಯ ವೃತ್ತಿಯಲ್ಲಿ ಅತ್ಯವಶ್ಯಕವಾದ ಅಂಶಗಳನ್ನು ತರಬೇತಿಯಲ್ಲಿ ಕಲಿಸಲಾಯಿತು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಯುವ ಪೀಳಿಗೆಯ ವೈದ್ಯರು ಅಂಜದೆ ಹಿಂಜರಿಯದೇ ದೈರ್ಯವಾಗಿ ಸಂಧರ್ಭವನ್ನು ನಿಭಾಯಿಸಬೇಕು ಎಂಬುದು ತರಬೇತಿಯ ಮುಖ್ಯ ಉದ್ದೇಶವಾಗಿದ್ದು, ಇದರಿಂದ ಸಂಸ್ಥೆಯ ಗೃಹ ವೈದ್ಯರುಗಳು ಪ್ರಯೋಜನವನ್ನು ಪಡೆದುಕೊಂಡು. ಸಂಸ್ಥೆಯಲ್ಲಿ ಸಧ್ಯದಲ್ಲಿಯೇ ಅತ್ಯಾಧುನಿಕ ಸ್ಕಿಲ್ ಪ್ರಯೋಗಾಲಯ ಕೂಡ ಪ್ರಾರಂಭ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು. ಅಲ್ಲದೆ ಸಾರ್ವಜನಿಕರೂ ಕೂಡ ಸಿಪಿಆರ್ ತರಬೇತಿಯನ್ನು ಪಡೆಯವ ನಿಟ್ಟಿನಲ್ಲಿ ಆಸಕ್ತಿಯುಳ್ಳ ಸಂಘ ಸಂಸ್ಥೆಗಳು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.