Header Ads Widget

Responsive Advertisement

232 ವರ್ಷಗಳ ಇತಿಹಾಸವಿರುವ ಕೊಡಗಿನ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸೆಪ್ಟಂಬರ್‌ 26 ರಂದು ಚಾಲನೆ


232 ವರ್ಷಗಳ ಇತಿಹಾಸವಿರುವ ಕೊಡಗಿನ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸೆಪ್ಟಂಬರ್‌ 26 ರಂದು ಚಾಲನೆ

ಕೊಡಗಿನ ನಾಡಹಬ್ಬವಾದ ಮಡಿಕೇರಿ ದಸರಾ  ಸುಮಾರು 232 ವರ್ಷಗಳ ಇತಿಹಾಸವಿದ್ದು, ಇತ್ತೀಚಿನ ವರ್ಷಗಳಲ್ಲಿ ದಸರಾ ನಾಡಹಬ್ಬವು ಸರ್ಕಾರದ ಅನುದಾನದೊಂದಿಗೆ ಜನೋತ್ಸವವಾಗಿ ಅಚರಿಸಲ್ಪಡಿತ್ತಿದ್ದು, ಮತ್ತಷ್ಟು ಪ್ರಖಾತಿ ಪಡೆದುಕೊಂಡಿದೆ. 

ಈ ಉತ್ಸವದಲ್ಲಿ 4 ಶಕ್ತಿ ದೇವತೆಗಳ ಕರಗಗಳು ಸಿಂಗಾರಗೊಂಡು ಸಾಂಪ್ರದಾಯಿಕ ಧಾರ್ಮಿಕ ಕಟ್ಟುಪಾಡುಗಳೊಂದಿಗೆ ಮಡಿಕೇರಿ ದಸರಾ ಉತ್ಸವಕ್ಕೆ ಚಾಲನೆ ನೀಡುವ ಮೂಲಕ  ಆಚರಿಸಲ್ಪಡಲಾಗುವುದು.  

ದಿನಾಂಕ: 26.09.2022 ರಂದು 4 ಶಕ್ತಿ ದೇವತೆಗಳ ಕರಗ ಮೆರವಣಿಗೆ ಆರಂಭ. ದಿನಾಂಕ: 27.09.2022 ರಂದು ಸಾಂಸ್ಕೃತಿಕ ಕಾರ್ಯಕ್ರಮ.

ದಿನಾಂಕ: 28.09.2022 ರಂದು ಸಾಂಸ್ಕೃತಿಕ ಕಾರ್ಯಕ್ರಮ.

ದಿನಾಂಕ: 29.09.2022 ರಂದು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ: 30.09.2022 ರಂದು ಮಹಿಳಾ ದಸರಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ: 01.10.2022 ರಂದು ಯುವ ದಸರಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ದಿನಾಂಕ: 02.10.2022 ರಂದು ಜನಪದ ದಸರಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ: 03.10.2022 ರಂದು ಮಕ್ಕಳ ದಸರಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ದಿನಾಂಕ: 04.10.2022 ರಂದು ಕವಿಗೋಷ್ಠಿ ಮತ್ತು ಆಯುಧ ಪೂಜಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ದಿನಾಂಕ: 05.10.2022 ರಂದು ವಿಜಯದಶಮಿಯ ರಾತ್ರಿ ದಶಮಂಟಪಗಳ ಶೋಭಾಯಾತ್ರೆಯಲ್ಲಿ 10 ದೇವಾಲಯಗಳಿಂದ ಅಸುರಿ ಶಕ್ತಿಗಳ ಸಂಹಾರದೊಂದಿಗೆ ವಿವಧ ಭಂಗಿಗಳಲ್ಲಿ ವಿಜಯದ ಸಂದೇಶ ನೀಡುವ ದಶಮಂಟಪಗಳು ಶೋಭಾಯಾತ್ರೆಯಲ್ಲಿ ಇಡೀ ನಗರವನ್ನೆ ಪುಳಕಿತಗೊಳಿಸುತ್ತದೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಧ್ಯ ರಾತ್ರಿ 12ಗಂಟೆಯಿಂದ ಬೆಳಗ್ಗಿನವರೆಗೆ ವಾದ್ಯಗೋಷ್ಠಿಯೊಂದಿಗೆ 4 ಶಕ್ತಿ ದೇವತೆಗಳ ಕರಗಗಳ ನಗರ ಪ್ರದಕ್ಷಿಣೆ ಇರುತ್ತದೆ.

ದಿನಾಂಕ: 06.10.2022 ರ ಮುಂಜಾನೆ ಸಾಂಪ್ರದಾಯದಂತೆ ಬನ್ನಿ ಕಡಿಯುವುದರ ಮೂಲಕ ದಸರಾ ಮುಕ್ತಾಯವಾಗಲಿದೆ.