Header Ads Widget

ಸರ್ಚ್ ಕೂರ್ಗ್ ಮೀಡಿಯ

ಇಂದಿನಿಂದ ಬೆಂಗಳೂರಿನಲ್ಲಿ ನಡೆಯಲಿದೆ ವನವಾಸಿ ಕಲ್ಯಾಣಾಶ್ರಮದ ರಾಷ್ಟ್ರೀಯ ಸಮ್ಮೇಳನ


ಇಂದಿನಿಂದ ಬೆಂಗಳೂರಿನಲ್ಲಿ ನಡೆಯಲಿದೆ ವನವಾಸಿ ಕಲ್ಯಾಣಾಶ್ರಮದ ರಾಷ್ಟ್ರೀಯ ಸಮ್ಮೇಳನ

ಸೆ.16 ರಿಂದ ಬೆಂಗಳೂರಿನಲ್ಲಿ ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮದ ರಾಷ್ಟ್ರ ಮಟ್ಟದ ಸಮ್ಮೇಳನ್ವು ನಡೆಯಲಿದೆ. ಈ ಸಮ್ಮೇಳನದಲ್ಲಿ ದೇಶ ಎಲ್ಲಾರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 900ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ವನವಾಸಿ ಕಲ್ಯಾಣಾಮಶ್ರವು ಸಾಮಾಜಿಕ ಸಂಸ್ಥೆಯಾಗಿದ್ದು ಪರಿಶಿಷ್ಟ ಪಂಗಡಗಳು, ವನವಾಸಿಗಳು, ಬುಡಕಟ್ಟು ಸಮುದಾಯದವರ ಅಭಿವೃದ್ಧಿಗಾಗಿ ಹಾಗೂ ಅವರ ಸಾಂಸ್ಕೃತಿಕ ಉಳಿವಿಗಾಗಿ ದೇಶದಾದ್ಯಂತ ಕೆಲಸ ಮಾಡುತ್ತಿದೆ. ದೇಶದಾದ್ಯಂತ ಸುಮಾರು 13,500 ಹಳ್ಳಿಗಳಲ್ಲಿ 20,000ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವನವಾಸಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುತ್ತಿದೆ.

ಭಾರತದಲ್ಲಿ ಸುಮಾರು 70ಕ್ಕೂ ವಿವಿಧ ಬುಡಕಟ್ಟುಗಳಿದ್ದು ಅವರು 12ಕೊಟಿಗೂ ಅಧಿಕ ಜನಸಂಖ್ಯೆ ಹೊಂದಿದ್ದಾರೆ. ಮೊಘಲರ ವಿರುದ್ಧದ ಹೋರಾಟ ಅಥವಾ ಪಾಶ್ಚಿಮಾತ್ಯರ ವಸಾಹತುಶಾಹಿಯ ವಿರುದ್ಧದ ಹೋರಾಟದ ಮೂಲಕ ಅವರೂ ಕೂಡ ಸಮಾಜದ ಇತರ ವರ್ಗಗಳಂತೆಯೇ ಸಾಮಾನ್ಯ ಇತಿಹಾಸದಲ್ಲಿ ಪಾಲುಹೊಂದಿದ್ದಾರೆ. ಆದರೆ ಇದುವರೆಗೂ ಅಂತಹ ಬುಡಕಟ್ಟು ವೀರರ ಚರಿತ್ರೆಗೆ ಮಾನ್ಯತೆ ದೊರಕಿಲ್ಲದಿರುವುದು ಅತ್ಯಂತ ವಿಷಾದನೀಯ ಸಂಗತಿ.

ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಇಂತಹ ಬುಡಕಟ್ಟು ವೀರರ ಸಾಧನೆಯನ್ನು, ಅವರ ಹೋರಾಟವನ್ನು ಮುನ್ನೆಲೆಗೆ ತರುವ ಕೆಲಸವನ್ನು ವನವಾಸಿ ಕಲ್ಯಾಣಾಶ್ರಮವು ಮಾಡುತ್ತಿದೆ. ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಸಹಯೋಗದಲ್ಲಿ ದೇಶದ ಸುಮಾರು 120 ವಿಶ್ವವಿದ್ಯಾಲಯಗಳಲ್ಲಿ ಈ ಬುಡಕಟ್ಟು ವೀರರ ಕುರಿತಾಗಿ ಉನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರಸ್ತುತ ಹಮ್ಮಿಕೊಳ್ಳಲಾಗುತ್ತಿರುವ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ತೆರೆಮರೆಯ ಕಾಯಿಯಂತಿರುವ ಬುಡಕಟ್ಟುವೀರರ ಕುರಿತಾದ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಇದಲ್ಲದೇ ವನವಾಸಿ ಕಲ್ಯಾಣಾಶ್ರಮವು ವನವಾಸಿಗಳ ಆರೋಗ್ಯ ಸ್ಥಿತಿಯ ಅಭಿವೃದ್ಧಿಯಲ್ಲಿಯೂ ಶ್ರಮಿಸುತ್ತಿದೆ. ಬಹುಪಾಲಿ ವನವಾಸಿಗಳಲ್ಲಿ ಕಾಡುವ ರಕ್ತ ಹೀನತೆ, ಅಪೌಷ್ಟಿಕತೆ ಮುಂತಾದವುಗಳನ್ನು ಹೋಗಲಾಡಿಸಲು ಶ್ರಮಿಸಲು ವನವಾಸಿ ಕಲ್ಯಾಣಾಶ್ರಮವು ಯೋಜನೆಯನ್ನು ಜಾರಿಗೆ ತರುತ್ತಿದ್ದು ಮೊದಲಿಗೆ 3000ರೋಗಿಗಳಿಗೆ ಚಿಕಿತ್ಸೆ ನೀಡಲು ಚಿಂತಿಸಲಾಗಿದ್ದು ಮುಂದಿನ ವರ್ಷದಲ್ಲಿ ಪ್ರತಿವರ್ಷ 10,000ರೋಗಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ.

ಇದಲ್ಲದೇ ಪಂಚಾಯತಿ ರಾಜ್‌ ವ್ಯವಸ್ಥೆಯ ಕುರಿತಾಗಿಯೂ ವನವಾಸಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಕುರಿತು ಜಾಗೃತಿ ಮೂಡಿಸಲು ಕೈಗೊಳ್ಳಬೇಕಾದ ಕ್ರಮಗಳ ಗ್ಗೆ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಚರ್ಚಿಸಲಾಗುತ್ತದೆ. ವನವಾಸಿಗಳಿಗೆಂದೇ ʼಏಕಲವ್ಯ ಕ್ರೀಡಾ ಪ್ರತಿಯೋಗಿತಾʼ ಎಂಬ ಹೆಸರಿನ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಆಯೋಜನೆಯನ್ನೂ ಮಾಡಲಾಗುತ್ತಿದೆ. ಬಿಲ್ವಿದ್ಯೆ, ಖೋಖೋ, ಮುಂತಾದ ಸ್ಪರ್ಧೆಗಳು ನಡೆಯಲಿವೆ. ಈ ವರ್ಷದ ಡಿಸೆಂಬರ್‌ ನಲ್ಲಿ ಕ್ರೀಡಾಕೂಟವನ್ನು ಆಯೋಜಿಸಲು ಯೋಚಿಸಲಾಗಿದ್ದು ಈ ವಿಷಯಗಳ ಕುರಿತೂ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ.