Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಡಿಕೇರಿ ದಸರಾ ಬಹಭಾಷಾ ಕವಿಗೋಷ್ಠಿಗೆ ಕವನಗಳ ಆಹ್ವಾನ


ಮಡಿಕೇರಿ ದಸರಾ ಬಹಭಾಷಾ ಕವಿಗೋಷ್ಠಿಗೆ ಕವನಗಳ ಆಹ್ವಾನ

ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ದಸರಾ ಬಹುಭಾಷಾ ಕವಿಗೋಷ್ಠಿ ಮುಂದಿನ‌ ಅ.4ರಂದು ನಡೆಯಲಿದೆ.   

ಕನ್ನಡ, ಕೊಡವ, ಅರೆಭಾಷೆ, ತುಳು, ಮಲಯಾಳಂ, ತಮಿಳು, ಬ್ಯಾರಿ, ಕೊಂಕಣಿ, ಹವ್ಯಕ, ಮರಾಟಿ, ತೆಲುಗು, ಹಿಂದಿ,ಕುರುಬ, ಯರವ,  ಆಂಗ್ಲ ಹೀಗೆ ವಿವಿಧ ಭಾಷೆಗಳಲ್ಲಿ ಕವಿಗಳು ಕವನ ವಾಚನ ಮಾಡಬಹುದಾಗಿದೆ.  

ಸ್ವರಚಿತ, ಇದುವರೆಗೆ ಎಲ್ಲಿಯೂ ಪ್ರಕಟಗೊಳ್ಳದ, ವಾಚಿಸಲ್ಪಡದ, ಇಪ್ಪತ್ತು ಸಾಲುಗಳಿಗೆ ಸೀಮಿತವಾದ ಕವನಗಳನ್ನು ಕಳಹುಹಿಸಿಕೊಡಬಹುದಾಗಿದೆ. ಕವನಗಳನ್ನು ಸೆ.21ರ ಒಳಗಾಗಿ ಕುಡೆಕಲ್ ಸಂತೋಷ್, ಅಧ್ಯಕ್ಷರು, ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಶಕ್ತಿ ದಿನಪತ್ರಿಕೆ ಕಾರ್ಯಾಲಯ, ಕೈಗಾರಿಕಾ ಬಡಾವಣೆ, ಈ ವಿಳಾಸಕ್ಕೆ ಅಥವಾ ಡಿಟಿಪಿ ಮಾಡಿಸಿ kudekalsanthu@gmail.com, ವ್ಯಾಟ್ಸಪ್ ಸಂಖ್ಯೆ 8762110948, 7795060505 ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. 

ಕೊನೆಯ ದಿನಾಂಕದ ನಂತರ ಬರುವ ಕವನಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಮೊ. 9972538584 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಡಿಕೇರಿ ದಸರಾ ಬಹುಭಾಷಾ ಕವಿ ಗೋಷ್ಠಿ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎನ್. ನಾಸಿರ್ ತಿಳಿಸಿದ್ದಾರೆ.