Header Ads Widget

Responsive Advertisement

ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದ ಏರ್ ನೆಕ್ಸ್ಟ್ ಕಾರ್ಯಕ್ರಮ; ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ


ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದ ಏರ್ ನೆಕ್ಸ್ಟ್ ಕಾರ್ಯಕ್ರಮ; ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ

ಮಡಿಕೇರಿ ಸೆ.15: ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದ ಏರ್ ನೆಕ್ಸ್ಟ್ ಕಾರ್ಯಕ್ರಮಕ್ಕಾಗಿ ಗುರುವಾರ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಯುವಕರ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಎಂಬ ವಿಷಯ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. 

ರೇಖಾ. ಎನ್ ಅವರು ಪ್ರಥಮ, ಆದಂ. ಎಂ.ಎನ್ ದ್ವಿತೀಯ, ಹರ್ಷಿತ .ಬಿ.ಎನ್ ಅವರು ತೃತೀಯ ಬಹುಮಾನಗಳನ್ನು ಪಡೆದರು. ಎಫ್‍ಎಂಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗತ್ ತಿಮ್ಮಯ್ಯ ಅವರು ರೇಡಿಯೋಗಳನ್ನು ಬಹುಮಾನವಾಗಿ ವಿತರಿಸಿ, ವ್ಯಕ್ತಿತ್ವ ವಿಕಸನಕ್ಕೆ  ಇಂತಹ ಕಾರ್ಯಕ್ರಮಗಳು ನೆರವಾಗುತ್ತವೆ ಎಂದರು. 

ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಡಾ.ವಿಜಯ್ ಅಂಗಡಿ ಅವರು ಕಾರ್ಯಕ್ರಮದ ಉದ್ದೇಶ, ವಿಷಯ ಮಂಡನೆ ಕುರಿತು ಮಾತನಾಡಿದರು. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ರೇಣುಶ್ರೀ ಅವರು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ್ದರು. ವಿನೋದ್ ಮೂಡಗದ್ದೆ ಇತರರು ಇದ್ದರು.