Header Ads Widget

Responsive Advertisement

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಶಿವಣ್ಣ ರವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ; ಕೊಡಗು ಶಾಖೆ ಅಧ್ಯಕ್ಷರಾದ ಕೊಟ್ಟುಕತ್ತೀರ ಸೋಮಣ್ಣ


ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಶಿವಣ್ಣರವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ; ಕೊಡಗು ಶಾಖೆ ಅಧ್ಯಕ್ಷರಾದ ಕೊಟ್ಟುಕತ್ತೀರ ಸೋಮಣ್ಣ

ದೇಶಕ್ಕಾಗಿ ತಮ್ಮ ಪ್ರಾಣ ಒತ್ತೆಯಿಟ್ಟು ತಮ್ಮ ಸಂಸಾರದಿಂದ ದೂರ ಉಳಿದು ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಾಜಿ ಸೈನಿಕರು  ತಮ್ಮ ಅಳಲನ್ನು ಪತ್ರಿಕಾಗೋಷ್ಠಿ ಮುಖಾಂತರ ತೊಡಿಕೊಂಡ ಪ್ರಸಂಗ ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಡೆಯಿತು.    

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಶಾಖೆಯ ಅಧ್ಯಕ್ಷರಾದ ಕೊಟ್ಟುಕತ್ತೀರ ಸೋಮಣ್ಣರವರು ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮಾಜಿ ಸೈನಿಕರ ಯಾವುದೇ ಬೇಡಿಕೆಗೆ ಸ್ಪಂದಿಸುವ ಗೋಜಿಗೆ ಹೋಗದೆ ಮಾಜಿ  ಸೈನಿಕರಿಗೆ ನೀಡಿದ ಆಶ್ವಾಸನೆ ಆಶ್ವಾಸನೆಯಾಗಿಯೇ  ಉಳಿದಿರುವುದು ತುಂಬ ನೋವಿನ ಸಂಗತಿಯಾಗಿದೆ. 

ಈ ಹಿಂದೆ ಮಾಜಿ ಸೈನಿಕರಿಗೆ  ಯಾವುದೇ ಮಾನದಂಡ ಅಳವಡಿಸದೆ ತಲಾ ಐದು ಏಕ್ರೆ ಜಮೀನನ್ನು ಸಾಗುವಳಿಗೆ ನೀಡುತ್ತಿದ್ದರು. ಆದರೆ ಈಗ      ಮಾಜಿ ಸೈನಿಕರನ್ನು ಜನಸಾಮಾನ್ಯರಿಗೆ ಅನ್ವಯವಾಗುವ ಕಾನೂನಿನ ಪ್ರಕಾರ ಮಂಜೂರು ಮಾಡುತ್ತಿದ್ದು ಯಾರಿಗೂ ಜಮೀನು ಆಗದಿರುವುದು ನಿಜಕ್ಕೂ ವಿಷಾದನೀಯ. ಹಾಗೆಯೆ ಸರ್ಕಾರಿ ನೌಕರಿ ನೇಮಕಾತಿಯಲ್ಲಿ ಒಟ್ಟು ಹುದ್ದೆಗಳ ಸಂಖ್ಯೆಯಲ್ಲಿ ಶೇಕಡಾ ಹತ್ತರಷ್ಟು ಹುದ್ದೆ ಮಾಜಿ ಸೈನಿಕರಿಗೆ ಮೀಸಲಿರಿಸಿದ್ದರು ನಿಯಮಾನುಸಾರ ನೇಮಕಾತಿಯಲ್ಲಿ ಅವಕಾಶ ನೀಡುವುದಿಲ್ಲ.    ಸರ್ಕಾರಿ ಕಛೇರಿಗಳಲ್ಲಿ ಮಾಜಿ ಸೈನಿಕರೆಂಬ ಕನಿಷ್ಠ ಅರಿವಿಲ್ಲದ ದಪ್ಪ ಚರ್ಮದ  ಅಧಿಕಾರಿಗಳು ಅಸಡ್ಡೆ ತೋರಿಸಿ ಮಾಜಿ ಸೈನಿಕರ ಮನಸ್ಸಿಗೆ ನೊವನ್ನುಂಟು ಮಾಡುತ್ತಿದ್ದಾರೆ. ಈ ಪರಿಣಾಮವಾಗಿ ಮಾಜಿ ಸೈನಿಕರು ಇದೇ ತಿಂಗಳ 12 ಮತ್ತು 13 ರಂದು ಕರ್ನಾಟಕ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಶಿವಣ್ಣ ರವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಈ ಸಂಬಂಧ ಕೊಡಗಿನ ಎಲ್ಲಾ ಮಾಜಿ ಸೈನಿಕ ಬಾಂಧವರು  ಭಾಗಿಯಾಗಿ ಸಹಕರಿಸುವಂತೆ  ಕೇಳಿಕೊಂಡಿರುತ್ತಾರೆ. 

ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಬೊಟ್ಟಂಗಡ  ಜಪ್ಪು. ಹೆಚ್.ಬಿ. ಬೋಜಮ್ಮ ಮತ್ತು  ಸೋಮೆಂಗಡ ಗಣೇಶ್ ತಿಮ್ಮಯ್ಯ ಉಪಸ್ಥಿತರಿದ್ದರು.

ವರದಿ: ✍️....ಕಿರಿಯಮಾಡ ರಾಜ್‌ ಕುಶಾಲಪ್ಪ