Header Ads Widget

Responsive Advertisement

ದಸರಾ ನೆನಪಿಸಿದ ಗಣೇಶ ವಿಸಜ೯ನೋತ್ಸವ.. !!! ಮಡಿಕೇರಿ ಜನತೆಯ ಪರವಾಗಿ ಅಭಿನಂದನೆಗಳು ಟೀಮ್ ಶಾಂತಿನಿಕೇತನ....


ದಸರಾ ನೆನಪಿಸಿದ ಗಣೇಶ ವಿಸಜ೯ನೋತ್ಸವ.. !!! ಮಡಿಕೇರಿ ಜನತೆಯ ಪರವಾಗಿ ಅಭಿನಂದನೆಗಳು ಟೀಮ್ ಶಾಂತಿನಿಕೇತನ.... 

ಪ್ರತೀ ವಷ೯ ಮಡಿಕೇರಿಯಲ್ಲಿ ಶಾಂತಿ ನಿಕೇತನ ಯುವಕ ಸಂಘದ ಗೌರಿಗಣೇಶ ಮೂತಿ೯ಗಳ  ಪ್ರತಿಷ್ಟಾಪನೆ, ಹಬ್ಬದ ಕ್ರೀಡಾಕೂಟ, ಅನ್ನಸಂತಪ೯ಣೆಯಂತೆಯೇ ಆ ಮೂತಿ೯ಗಳ ವಿಸಜ೯ನೆ ಕೂಡ ವಿಭಿನ್ನವಾಗಿರುತ್ತದೆ... ವಿಶಿಷ್ಟವಾಗಿರುತ್ತದೆ.

ಒಂದು ಶಿಸ್ತು ಬದ್ದ ಸಂಘಟನೆಯಾಗಿ ಶಾಂತಿ ನಿಕೇತನ ಯುವಕ ಸಂಘ ಗೌರಿಗಣೇಶೋತ್ಸವವನ್ನು ಶೖದ್ದಾಭಕ್ತಿಯಿಂದ ಆಚರಿಸಿಕೊಂಡು ಬಂದಿದೆ.

ಕಳೆದ ಕೆಲವು ವಷ೯ಗಳಿಂದ ಈ ಯುವಕ ಸಂಘದವರು ಮಡಿಕೇರಿ ದಸರಾ ನೆನಪಿಸುವಂತೆ ಅತ್ಯಂತ ಅದ್ದೂರಿಯಾಗಿ ಶೋಭಾಯಾತ್ರೆಯ ಮೂಲಕ ಮಡಿಕೇರಿಯಲ್ಲಿ ಗೌರಿಗಣೇಶ ಮೂತಿ೯ಗಳ ಮೆರವಣಿಗೆ ನಡೆಸಿ ಗೌರಿಕೆರೆಯಲ್ಲಿ ಮೂತಿ೯ ವಿಸಜ೯ನೆ ಮಾಡುತ್ತಾರೆ.

ಪುರಾಣದ ಮಹತ್ವದ ಕಥನವನ್ನು ಚಲನೆಯುಳ್ಳ ಆಕೖತಿಯ ರೂಪದಲ್ಲಿ ಧ್ವನಿಬೆಳಕಿನ ಹಿನ್ನಲೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಈ ಮೆರವಣಿಗೆ ಸಂದಭ೯ ಪ್ರಸ್ತುತಪಡಿಸಲಾಗುತ್ತದೆ. ಇದು ಜಾರಿಯಾದ  ಕೆಲವೇ ವಷ೯ಗಳಲ್ಲಿ ಮಡಿಕೇರಿಯಲ್ಲಿ ಅತ್ಯಂತ ಜನಪ್ರಿಯತೆ ಪಡೆದುಕೊಂಡಿರುವುದು ಶಾಂತಿನಿಕೇತನ ತಂಡದ ಯುವಕರ ಪರಿಶ್ರಮಕ್ಕೆ ಸಂದ ಹಿರಿಮೆ.

ಈ ವಷ೯ 44 ನೇ ಹಬ್ಬದ ವಷ೯. ಶನಿವಾರದಂದು ಅತೀ ಸಡಗರದಿಂದ ಶಾಂತಿನಿಕೇತನ ತಂಡದವರು ಗೌರಿಗಣೇಶ ಮೂತಿ೯ಯನ್ನು ಸಾವಿರಾರು ಜನರನ್ನು ಮೆರವಣಿಗೆಯಲ್ಲಿ ಒಳಗೊಳ್ಳುವ ಮೂಲಕ ವಿಸಜಿ೯ಸಿದ್ದಾರೆ.

ಈ ವಷ೯ ಗಣೇಶನಿಂದ ತಾರಕನ ಸಂಹಾರ ಎಂಬ ಕಥಾಪ್ರಸಂಗವನ್ನು ಮಂಟಪದಲ್ಲಿ ಅಳವಡಿಸಲಾಗಿತ್ತು. ಧ್ವನಿಬೆಳಕು ಚೆನ್ನಾಗಿತ್ತು ಕಥಾ ಪ್ರಸಂಗದ ಕೊನೇಯಲ್ಲಿ ವಿರಾಟ್ ಸ್ವರೂಪ ತೋರುವ  ಗಣೇಶನನ್ನು ಕಣ್ತುಂಬಿಕೊಳ್ಳುವುದೇ ಚಂದದ ಅನುಭವ..

ಈ ಬಾರಿಯೂ ಸಾವಿರಾರು ಮಂದಿ ಶಾಂತಿನಿಕೇತನ ಯುವಕ ಸಂಘದ ಗಣೇಶ ಮೆರವಣಿಗೆಯನ್ನು ನೋಡಿ ಸಂತೋಷಗೊಂಡರು. ಸಂಭ್ರಮಿಸಿದರು. ಚಪ್ಪಾಳೆ ತಟ್ಟಿದರು.ಮನಸ್ಸಿನಲ್ಲಿ ಅನೇಕ ದಿನಗಳ ಕಾಲ ಉಳಿಯುತ್ತದೆ ಎಂದು ಶ್ಲಾಘಿಸಿದರು.

ದಸರಾ ಮಂಟಪಕ್ಕೆ ಯಾವುದೇ ಕಡಮೆಯಿಲ್ಲದಂತೆ, ಮಿನಿ ದಸರಾ ನೆನಪಿಸುವಂತೆ ಮೆರವಣಿಗೆ ನಡೆಯಿತು ಎಂಬ ಪ್ರಶಂಸೆ ವ್ಯಕ್ತವಾಯಿತು.👏🏻👏🏻👏🏻

ಈ ಮಂಟಪದ ಅಂದಚಂದದ ಹಿಂದೆ ಶಾಂತಿನಿಕೇತನ ಯುವಕ ಸಂಘದ ನೂರಾರು ಯುವಕರ ಪರಿಶ್ರಮ ನಿಜಕ್ಕೂ ಶ್ಲಾಘನೀಯ

ಹಬ್ಬಕ್ಕೆ 3 ತಿಂಗಳ ಮುನ್ನವೇ ಕಥಾ ಪ್ರಸಂಗದಿಂದ ಹಿಡಿದು ಪ್ರತೀಯೊಂದನ್ನೂ ವ್ಯವಸ್ಥಿತವಾಗಿ ಯೋಚಿಸಿ ...ಯೋಜಿಸುವ ಈ ತಂಡ, ಹಗಲೂ ರಾತ್ರಿ ಶ್ರಮಿಸುತ್ತದೆ.👏🏻👏🏻👌🏻

ಆದರೆ. ಈ ಸಲ ವರುಣ  ಕೖಪೆತೋರದೆ ಯುವಕರು ಪರದಾಡುವಂತೆ ಮಾಡಿದ್ದನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ.🙃

ಶನಿವಾರದ ಮೆರವಣಿಗೆಗೆ ಶುಕ್ರವಾರ ಬೆಳಗ್ಗಿನಿಂದಲೇ ಮಂಟಪ ಸಿದ್ದಗೊಳಿಸುವ ಕಾಯ೯ದಲ್ಲಿ ಯುವವೖಂದ ತೊಡಗಿರುವಂತೆಯೇ ಪ್ರಾರಂಭವಾದ ಮಳೆರಾಯ, ಮೆರವಣಿಗೆ ಸಂದಭ೯ವೂ ಬಿಡಿದೇ ಕಾಡಿದ.😥

ಮಳೆಯ ಕಾಟವನ್ನೂ ಲೆಕ್ಕಿಸದೇ ಯುವಕರು ಮಳೆಯಲ್ಲಿಯೇ ದುಡಿದರು. ತಮ್ಮ ಮನಸ್ಸಿನಲ್ಲಿ ಏನಿತ್ತೋ ಅದನ್ನೂ ಅತ್ಯಂತ ಯಶಸ್ವಿಯಾಗಿ ಮಾಡಿ ತೋರಿಸಿದರು.👏🏻👏🏻

ಇದರಿಂದಾಗಿಯೇ..

ಒಂದು ಚಂದದ ಮಂಟಪ, ಒಂದು ಉತ್ತಮ ಕಥಾ ಪ್ರಸಂಗವನ್ನು ಕೊಡೆ ಹಿಡಿಯೇ ಸಾವಿರಾರು ನೋಡುಗರು ಕಣ್ತುಂಬಿಕೊಳ್ಳಲು ಸಾಧ್ಯವಾಯಿತು.

ಮೆರವಣಿಗೆಯಲ್ಲಿಯೂ ಅಷ್ಟೇ.. ಸುರಿಯುವ ಮಳೆ ಲೆಕ್ಕಿಸದೇ ಯುವಕ, ಯುವತಿಯರು ಡಿಜೆಗೆ ಕುಣಿದೇ ಕುಣಿದರು. ಸ್ವಯಂಸೇವಕರು ದಾರಿಯುದ್ದಕ್ಕೂ ಶಿಸ್ತು ಪ್ರದಶಿ೯ಸಿ ವಾಹನ ಸಂಚಾರ ಸುಗಮಗೊಳಿಸುತ್ತಿದ್ದರು.

ಮಂಟಪ ನೋಡಲು ಹಿರಿಯರೂ ವಯಸ್ಸು, ಮಳೆ, ಛಳಿ, ಮಂಜು ಲೆಕ್ಕಿಸದೇ ಬಂದರು. ಹಬ್ಬದ ಸಂಭ್ರಮಕ್ಕಾಗಿ ಮನೆಮಂದಿಯೆಲ್ಲಾ ಅಲ್ಲಲ್ಲಿ ಸೇರಿದ್ದರು. ಮಕ್ಕಳು ಬಿಡಿ.. ಕೈಗೆ ಸಿಕ್ಕಿದರೆ ಕೇಳಿ.. ಡಿಜೆ ಸೌಂಡಿಗೆ ಡ್ಯಾನ್ಸ್ ಡಾನ್ಸ್..

ಮಡಿಕೇರಿಯಲ್ಲಿ ಇಂಥ ಚಂದದ ವಾತಾವರಣ ಸೖಷ್ಟಿಸಿದ, ಈ ಮೂಲಕ ಗೌರಿಗಣೇಶ ಉತ್ಸವವನ್ನು ಎಲ್ಲರೂ ಸಂಭ್ರಮಿಸುವಂತೆ ಮಾಡಿದ ಶಾಂತಿ ನಿಕೇತನ ಯುವಕ ಸಂಘದ  ಚೇತನ್ ಮತ್ತು ಗೆಳೆಯರ ತಂಡಕ್ಕೆ ಮಡಿಕೇರಿ ಜನತೆಯ ಪರವಾಗಿ ಅಭಿನಂದನೆಗಳು..👏🏻👏🏻

ಸಹಕಾರ ನೀಡಿದ ಪೊಲೀಸರು ಚೆಸ್ಕಾಂ ಸಿಬ್ಬಂದಿ, ಸ್ವಯಂಸೇವಕರು, ಅಚ೯ಕರು,  ಇಂಥ ಸಂಭ್ರಮಕ್ಕೆ ಕೊಡುಗೆ ನೀಡಿದ ದಾನಿಗಳು, ಸುಂದರ ಮಂಟಪದ ಪರಿಶ್ರಮದ ಹಿಂದೆ ದುಡಿದ ಮನಸ್ಸುಗಳಿಗೆಲ್ಲಾ ನಮನಗಳು...🙏🏻

ಇಂಥ ಮನಸ್ಸುಗಳ ಸಮಾರಂಭಕ್ಕೆ ಹೊತ್ತು ಗೊತ್ತಿಲ್ಲದೇ ಬಂದು, ಸಂಭ್ರಮಕ್ಕೆ ನೀರೆರಚಲು ನೋಡಿ ...ಅದರಲ್ಲಿ ವಿಫಲನಾದ ವರುಣನೇ.... 

ಥೂ.. ನಾಚಿಕೆಯಾಗಬೇಕು ನಿನಗೆ…!!! 

ಶಾಂತಿನಿಕೇತನದ ಉತ್ಸಾಹಿ  ತಂಡವೇ ..... ಮಡಿಕೇರಿ ಜನತೆ ನಿಮ್ಮೊಂದಿಗಿದ್ದಾರೆ.. ಎಂದೆಂದೂ.... ನಿಮ್ಮ ವಿಭಿನ್ನ ಪ್ರಯತ್ನ ನಿರಂತರವಾಗಿರಲಿ..


ಪ್ರೀತಿಯಿಂದ,🌹 ಬರಹ: ✍️.... ಅನಿಲ್ ಎಚ್.ಟಿ. 

( ಪತ್ರಕರ್ತರು )

( ಅನಿಲ್ ಎಚ್.ಟಿ. )