ಹುದಿಕೇರಿಯಲ್ಲಿ ನಡೆದ ಅದ್ದೂರಿಯ ಗೌರಿ ಗಣೇಶ ಉತ್ಸವ
ಹುದಿಕೇರಿಯಲ್ಲಿ ನಡೆದ ಅದ್ದೂರಿಯ ಗೌರಿ ಗಣೇಶ ಉತ್ಸವದ ಸಮಾರೋಪ ಕಾರ್ಯಕ್ರಮವು ನಡೆಯಿತು. ವಾಹನ ಮಾಲೀಕರ ಮತ್ತು ಚಾಲಕರ ಸಂಘ ದ ಅಧ್ಯಕ್ಷ ಬಾನಂಗಡ ಅರುಣ್ ರವರು ಅಧ್ಯಕ್ಷತೆ ವಹಿಸಿ ಸ್ವಾಗತ ಮಾಡಿದರು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ವಕೀಲ ಮತ್ತು ನೋಟರಿ ಎಂ.ಟಿ.ಕಾರ್ಯಪ್ಪ ಮಾತನಾಡಿ ಹಿಂದೂ ಧರ್ಮದ ಪವಿತ್ರದ ಬಗ್ಗೆ ಗೌರಿ ಗಣೇಶ ಉತ್ಸವದ ಮಹತ್ವ ಮತ್ತು ಮತಾಂತರ ಪಿಡುಗನ್ನು ಹೋಗಲಾಡಿಸಲು ಕರೆ ನೀಡಿದರು. ಎಲ್ಲರೂ ಅವರವರ ಧರ್ಮ ವನ್ನು ಪ್ರೀತಿಸಿ ಪರ ಧರ್ಮವನ್ನು ಗೌರವಿಸಿ ಎಂದು ಕರೆ ನೀಡಿದರು.
ಇನ್ನೋರ್ವ ಅತಿಥಿಯಾಗಿದ್ದ ಶ್ರೀಧರ್ ನೆಲ್ಲಿತಾಯ ಮಾತನಾಡಿ ಗಾಂಧಿ ಮೆಟ್ಟಿದ ಹುದಿಕೇರಿ ಮತ್ತು ಈ ಬಾಗದ ಹಿರಿಯ ನಾಗರಿಕರ ಬಗ್ಗೆ ಮಾಹಿತಿ ನೀಡಿ ಸರಕಾರದ ಯೋಜನೆ ಬಗ್ಗೆ ವಿವರಿಸಿದರು. ಸಧ್ಯದಲೇ ಹುದಿಕೇರಿ ಯಲ್ಲಿ ಉಚಿತ ಅರೋಗ್ಯ ಶಿಬಿರ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಮಾರಮಾಡ ಮಾಚಮ್ಮ, ಸಮಾಜ ಸೇವಕ ವಸೂರಾಜ್, ಶಿಕ್ಷಕಿ ಆಶಾ ಜ್ಯೋತಿ ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೊಡOಗಡ ವಾಸು ಬಿದ್ದಪ್ಪ, ಲೋಹಿತ್ ಉಪಸ್ಥಿತರಿದ್ದರು. ವಂದನಾರ್ಪಣೆ ಯನ್ನು ಪತ್ರಕರ್ತ ಕಿರಿಯಮಾಡ ರಾಜ್ ಕುಶಾಲಪ್ಪ ಮಾಡಿದರು. ರಾತ್ರಿ ಕೊಡವ ನೈಟ್ ಸಂಗೀತ ಕಾರ್ಯಕ್ರಮ ವನ್ನು ಚೆಕ್ಕೇರ ಪಂಚಮ್ ಮತ್ತು ತಂಡ ಪ್ರಸ್ತುತ ಪಡಿಸಿ ಜನರಿಗೆ ಅದ್ಬುತ ಮನರಂಜನೆ ನೀಡಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network