Header Ads Widget

ಸರ್ಚ್ ಕೂರ್ಗ್ ಮೀಡಿಯ

ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ


ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ 

ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ 2021-2022 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ: 18-09-2022 ರಂದು ಸಂಘದ ಸಭಾಂಗಣದಲ್ಲಿ ಅಧ್ಯಕ್ಷರಾದ ಚೇಂದಿರ ರಘು ತಿಮ್ಮಯ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರು  ತಮ್ಮ ಸ್ವಾಗತ ಭಾಷಣದಲ್ಲಿ ಸಂಘವು ಈ ಸಾಲಿನಲ್ಲಿ 15,21,108.50 ರೂಪಾಯಿ ನಿವ್ವಳ ಲಾಭ ಗಳಿಸಿದೆ, ಸದಸ್ಯರ ಪಾಲು ಬಂಡವಾಳ 1,41,27,106 ರೂಪಾಯಿ ಇದೆ ಎಂದರು.                      

ಈ ಸಂಘವು 2708 ಆರ್ಹ  ಸದಸ್ಯರನ್ನು ಹೊಂದಿದ್ದು, 21,19,00,000 ರೂಪಾಯಿ ಮೊತ್ತದ ಠೇವಣಿ, ಸದಸ್ಯರಿಗೆ 17,45,00,000 ರೂಪಾಯಿ ಮೊತ್ತದ ವಿವಿಧ ಬಗೆಯ ಸಾಲವನ್ನು ನೀಡಲಾಗಿದೆ. ಸದಸ್ಯರ ಪಾಲು ಬಂಡವಾಳಕ್ಕೆ ಲಾಭಾಂಶದಲ್ಲಿ ಶೇಕಡಾ 5 ರಷ್ಟು ಡಿವಿಡೆಂಡ್ ಪಾವತಿಸಲಾಗುವುದು ಎಂದರು.

ಸಂಘವು ಈ ಸಾಲಿನಲ್ಲಿ ಸದಸ್ಯರಿಗೆ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಮಾನ್ಯ ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಯೋಜನೆಯಡಿ ರೂಪಾಯಿ ಎಂಬತ್ತು ಲಕ್ಷ ವೆಚ್ಚದ 600 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ನಿರ್ಮಿಸಿದೆ. ಮುಂದಿನ ದಿನಗಳಲ್ಲಿ ಸದಸ್ಯರಿಗೆ ತೋಟದ ಮನೆ ನಿರ್ಮಾಣ ಮಾಡಲು ಗೃಹ ಸಾಲ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ಹಾಗೆಯೇ ಈ ಸಂಘವು ಯಾವುದೇ ಬ್ಯಾಂಕಿಂಗ್ ಸಂಸ್ಥೆಗಳ ಸಹಾಯ ಪಡೆಯದೆ ತನ್ನದೇ ಬಂಡವಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದಕ್ಕೆ ಸದಸ್ಯರೆ ಕಾರಣ ಎಂದರು.                        

ಕಾರ್ಯಕ್ರಮ ಹುದಿಕೇರಿಯ ಲಿಟಲ್ ಫ್ಲವರ್ ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಸದಸ್ಯರಾದ ತ್ರಷನ್ ಮಾದಯ್ಯ ವಂದಿಸಿದರು.  ಈ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು. ಮಹಾಸಭಯಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ರಂಡ ಯಂ.ತಮ್ಮಯ್ಯ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ: ✍️....ಕಿರಿಯಮಾಡ ರಾಜ್‌ ಕುಶಾಲಪ್ಪ