Header Ads Widget

Responsive Advertisement

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮಡಿಕೇರಿ ನಗರದ ಕೆಲವು ಬೀದಿ ದೀಪದ ವಯರ್ ಗಳು


ಅಪಾಯಕ್ಕೆ  ಆಹ್ವಾನ ನೀಡುತ್ತಿರುವ ಮಡಿಕೇರಿ ನಗರದ ಕೆಲವು ಬೀದಿ ದೀಪದ ವಯರ್ ಗಳು

ಮಡಿಕೇರಿ ನಗರದ ಹಲವು ಭಾಗದಲ್ಲಿ ನಗರಸಭೆ ಹಾಗೂ ಚೆಸ್ಕಾಂ  ವತಿಯಿಂದ  ನಗರದಲ್ಲಿ ಬೀದಿ ದೀಪಗಳನ್ನು ಅಳವಡಿಸಿದರೆ ಆದರೆ ಅವುಗಳನ್ನು ನಿರ್ವಹಣೆ ಮಾಡಲು  ಯಾವುದೇ ಸ್ವಿಚ್  ಇಡದೆ  ಕೇವಲ  ವಯರ್ ಗಳ ಮೂಲಕ ಆಫ್ ಆನ್ ಮಾಡುತ್ತಿರುವುದು ಕಂಡುಬರುತ್ತಿದ್ದು ಇದು  ಕೇವಲ ಮೂರು  ಅಡಿಗಳ ಎತ್ತರದಲ್ಲಿದ್ದು, ಮಕ್ಕಳ ಕೈಗೆಟಕುವಷ್ಟು ಸುಲಭವಾಗಿದೆ.  

ಕೊಹಿನೂರು ರಸ್ತೆಯ ಭಾಗದಲ್ಲಿ ಹತ್ತಿ ಹೆಚ್ಚು ವಾಹನಗಳು ಹಾಗೂ  ಕಾಲೇಜು ಹಾಗೂ ಶಾಲಾ ಮಕ್ಕಳು ಈ ಭಾಗದಲ್ಲಿ ಸಂಚರಿಸುತ್ತಿದ್ದು, ಕೆಲವು ಹಸುಗಳು ಕೂಡ  ಓಡಾಡುತ್ತಿರುತ್ತಿದು ಈ ರೀತಿಯ ವಯರ್ ನಿಂದ  ಏನಾದರೂ ಅಪಾಯ ಸಂಭವಿಸಿದ್ದಲ್ಲಿ ಇದಕ್ಕೆ ಮಡಿಕೇರಿಯ ನಗರಸಭೆ ಹಾಗೂ ಚೆಸ್ಕಾಂ  ಅವರುಗಳೆ ನೇರ ಹೊಣೆಯಾಗಬೇಕಾಗುತ್ತದೆ ಇದರ ಬಗ್ಗೆ ಸ್ಥಳೀಯ  ಸಾರ್ವಜನಿಕರು  ಮಡಿಕೇರಿ ನಗರಸಭೆ ಹಾಗೂ ನಗರಸಭಾ ಸದಸ್ಯರ ಗಮನಕೆ ಹಾಗೂ ಮಡಿಕೇರಿಯ ಚೆಸ್ಕಾಂ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಕೊಡಗು ಹಿತರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ತಿಳಿಸಿದ್ದಾರೆ.

ಈ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಏನಾದರು ಅನಾಹುತ  ಸಂಭವಿಸಿದ ಮೇಲೆಯೇ  ಎಚ್ಚರವಾಗುವುದೇ?  ಸಾರ್ವಜನಿಕರು ದೂರು ನೀಡಿದ್ದರು ಇನ್ನು ಇವರುಗಳಿಗೆ ನಿದ್ದೆ ಬಿಡಲಿಲ್ಲವೆ?  ಇದಕ್ಕೆ ಸಂಬಂಧ ನಗರಸಭೆ ಹಾಗೂ  ಚೆಸ್ಕಾಂ ಈ ರೀತಿಯ ಅಪಾಯದಲ್ಲಿನ ವಯರ್ ಗಳನ್ನು ಕೂಡಲೇ ತೆರವು ಮಾಡಿ  ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರವಹಿಸಬೇಕಾಗಿ ಕೊಡಗು ಹಿತರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಒತ್ತಾಯಿಸಿದೆ.