Header Ads Widget

Responsive Advertisement

‘ಗ್ರಾಮೀಣ ಇತಿಹಾಸ’ ದಾಖಲೀಕರಣ ಅಗತ್ಯ: ಡಾ.ನೆರವಂಡ ವೀಣಾ ಪೂಣಚ್ಚ


‘ಗ್ರಾಮೀಣ ಇತಿಹಾಸ’ ದಾಖಲೀಕರಣ ಅಗತ್ಯ: ಡಾ.ನೆರವಂಡ ವೀಣಾ ಪೂಣಚ್ಚ

ಮಡಿಕೇರಿ: ಕೊಡಗಿನ ಪೂರ್ವದ ‘ಗ್ರಾಮೀಣ ಇತಿಹಾಸ’ದ ದಾಖಲೀಕರಣಕ್ಕೆ ಅಗತ್ಯ ಪ್ರಯತ್ನಗಳು ನಡೆಯಬೇಕು ಎಂದು ಮುಂಬೈ ವುಮೆನ್ಸ್ ಯೂನಿವರ್ಸಿಟಿಯ ರಿಸರ್ಚ್ ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್‍ನ ನಿರ್ದೇಶಕಿ ಡಾ.ನೆರವಂಡ ವೀಣಾ ಪೂಣಚ್ಚ ಅವರು ಸಲಹೆ ಮಾಡಿದ್ದಾರೆ. 

 ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮಡಿಕೇರಿ ಕೊಡವ ಸಮಾಜದ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ‘ಸಾಹಿತ್ಯ ಮತ್ತು ಸಂಶೋಧನಾ ದಿನ’ ಕಾರ್ಯಕ್ರಮದಲ್ಲಿ ಪುಸ್ತಕ ಮತ್ತು ಸಂಶೋದನಾ ಒಟ್ಟು 17 ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

 ಪ್ರಸ್ತುತ ಲಭ್ಯವಿರುವ ಎಲ್ಲಾ ಇತಿಹಾಸಗಳು ರಾಜ ವಂಶಸ್ಥರು, ರಾಜರು ಮತ್ತು ಅವರ ಆಳ್ವಿಕೆಯ ಮಾಹಿತಿಗಳನ್ನು ಒದಗಿಸುತ್ತವೆ. ಆದರೆ, ಕೊಡವ ಭಾಷಿಕರ ಹಿಂದಿನ ಗ್ರಾಮೀಣ ಪ್ರದೇಶದ ಪೂರ್ವಜರ ಬದುಕು,  ಪರಂಪರೆಯ ಇತಿಹಾಸವನ್ನು ದಾಖಲಿಸುವ ಪ್ರಯತ್ನಗಳು ಮತ್ತಷ್ಟು ಕೈಗೊಳ್ಳಬೇಕು ಎಂದರು. 

      ಗ್ರಾಮೀಣ ಸಂಸ್ಕøತಿ, ಪರಂಪರೆ, ಹಿಂದಿನ ದಿನಮಾನಗಳಿಗೆ ಸಂಬಂಧಿಸಿದಂತೆ ಅಲಿಖಿತವಾಗಿ ಬಾಯ್ದೆರೆಯಾಗಿ ಒಬ್ಬರಿಂದ ಒಬ್ಬರಿಗೆ ಹರಿದು ಬಂದ ವಿಚಾರಗಳನ್ನು ಸಂಶೋಧನಾತ್ಮಕ ದೃಷ್ಟಿಕೋನದಿಂದ ಸಂಗ್ರಹಿಸಿ ಗ್ರಾಮೀಣ ಇತಿಹಾಸವನ್ನು ಉಳಿಸಿ ಬೆಳಸಲು ಪ್ರಯತ್ನಗಳು ನಡೆಯಬೇಕು ಎಂದು ಡಾ.ನೆರವಂಡ ವೀಣಾ ಪೂಣಚ್ಚ ಅವರು ಹೇಳಿದರು. 

 ಕೊಡಗಿನಲ್ಲಿ ಈ ಹಿಂದೆ ನೆಲೆಸಿದ್ದ ಪೂರ್ವಜರ ಬದುಕು ಹೇಗಿತ್ತು, ಅರಣ್ಯ ಪ್ರದೇಶಗಳಲ್ಲಿ ಅಂದಿನ ಜನರ ಜೀವನ ಶೈಲಿ ಏನಾಗಿತ್ತು ಎನ್ನುವ ಅಂಶಗಳತ್ತ ಗ್ರಾಮೀಣ ಇತಿಹಾಸದ ದಾಖಲೀಕರಣದ ಮೂಲಕ ಬೆಳಕು ಚೆಲ್ಲುವ ಕಾರ್ಯ ನಡೆಯುವುದು ಅತ್ಯವಶ್ಯವೆಂದು ತಿಳಿಸಿದರು.

      ಕೊಡಗಿನಲ್ಲಿ ಕೊಡವ ಭಾಷೆಗಳನ್ನಾಡುವ ವಿವಿಧ ಸಮುದಾಯಗಳಿವೆ. ಇವೆಲ್ಲವೂ ತಮ್ಮದೇ ಆದ ಆಚಾರ, ವಿಚಾರ, ಶ್ರೀಮಂತ ಸಂಸ್ಕøತಿ ಹೊಂದಿದೆ. ಆ ನಿಟ್ಟಿನಲ್ಲಿ ಕೊಡವ ಭಾಷೆ, ಸಾಹಿತ್ಯ ಮತ್ತು ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದರು.

ಕೊಡವ ಸಮಾಜದ ಅಧ್ಯಕ್ಷರಾದ ಮಂಡುವಂಡ ಪಿ.ಮುತ್ತಪ್ಪ ಅವರು ಮಾತನಾಡಿ ಕೊಡಗರ ಕಲೆ-ಸಂಸ್ಕøತಿ ವಿಶಿಷ್ಟವಾದದ್ದು ಅದನ್ನು ಉಳಿಸಿಕೊಳ್ಳುವಂತ ಕೆಲಸವಾಗಬೇಕು ಎಂದರು.

ಯುವಜನರು ಕೊಡಗಿನ ಆಚಾರ-ವಿಚಾರ ಬೆಳೆಸುವಂತಾಗಬೇಕು ಮುಂದಿನ ಪೀಳಿಗೆಗೆ ಕೊಡವ ಭಾಷೆ ಮತ್ತು ಸಂಸ್ಕೃತಿ ಉಳಿಸುವಂತಾಗಬೇಕು ಎಂದರು.  

ಕೊಡವ ಸಮಾಜವು ಎಲೆಮರೆ ಕಾಯಿಗಳಂತೆ ಇರುವ ಪ್ರತಿಭೆಗಳನ್ನು ಹೊರ ತರುವಂತ ಕೆಲಸವನ್ನು ಮಾಡುತ್ತಿದೆ, ಮುಂದೆಯೂ ಇಂತಹ ಹಲವಾರು ಪ್ರತಿಭೆಗಳನ್ನು ಹೊರತರುವಲ್ಲಿ ಕಾರ್ಯನಿರ್ವಹಿಸಲಿದೆ. ಕೊಡಗಿನ ಜನರು ಎಲ್ಲಾ ಒಂದೇ ಎನ್ನುವ ಭಾವದಿಂದ ಕೂಡಿದಾಗ ಭಾμÉಯ ಅಭಿವೃದ್ಧಿ ಮತ್ತು ಈ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಡಾ.ಪಾರ್ವತಿ ಅಪ್ಪಯ್ಯ ಅವರು ಮಾತನಾಡಿ ಕೊಡಗಿನ ಆಚಾರ-ವಿಚಾರ ಸಂಸ್ಕೃತಿಯು ವಿಶಿಷ್ಟ ಮಾನ್ಯತೆ ಪಡೆದಿದೆ, ಅದನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು. ಎಲ್ಲಾ ಭಾμÉಗಳಿಗೂ ಅದರದೇ ಆದ ಮಾನ್ಯತೆಯಿದೆ ಅಂತೆಯೇ ಕೊಡವ  ಭಾμÉಗೂ ಹೆಚ್ಚಿನ ಮಾನ್ಯತೆ ಕೂಡ ಇದೆ ಎಂದರು. 

       ಏಳು ಪುಸ್ತಕಗಳ ಅನಾವರಣ; ಸಮಾರಂಭದಲ್ಲಿ ಡಾ.ಐಚೆಟ್ಟೀರ ಮಾ ಮುತ್ತಣ್ಣ ಅವರು ಬರೆದಿರುವ ಎ ಟಿನಿ ಮಾಡೆಲ್ ಸ್ಟೇಟ್ ಆಫ್ ಸೌತ್ ಇಂಡಿಯಾ(ಮರುಮುದ್ರಣ), ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರು ರಚಿಸಿರುವ ‘ಅಪ್ಪಚ್ಚಕವಿ ವಿದ್ಯಾಲಯ ‘ಪ್ರಜ್ವಲ್ ಮೆಮೋರಿಯಲ್ ಮ್ಯೂಸಿಯಂ’, ಉಳುವಂಗಡ ಕಾವೇರಿ ಉದಯ ಅವರ ‘ಕಾವೇರಿ ಮಡ್ ಲ್’, ಚೊಟ್ಟೆಯಂಡಮಾಡ ಲಲಿತ ಕಾರ್ಯಪ್ಪ ಅವರ ‘ಎದೆರಾಳ್‍ತ್ ಬೀಂದ ಪೂ’, ಚಾಚಮ್ಮಂಡ ಗೌರಮ್ಮ ಮಾದಮ್ಮಯ್ಯ ಅವರ ‘ಕೊಡಗ್‍ನ ಧಾರ್ಮಿಕ ಕೇಂದ್ರ ಪಿಂಞ ನಮ್ಮೆ ನಾಳ್’, ಬಡಕಡಮ್ಮಂಡ ಕಸ್ತೂರಿ ಗೋವಿಂದಮ್ಮಯ್ಯ ಅವರ  ‘ಪುರುಷೋತ್ತಮ ಶ್ರೀ ರಾಮ’, ತೇಲಪಂಡ ಕವನ್ ಕಾರ್ಯಪ್ಪ ಅವರ ‘ಕೊಡವ ಪಿಂಞ ಕೊಡವ ಭಾಷಿಕಂಗಡ ಮನೆಪೆದ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. 

    ಸಂಶೋಧನಾ ಪುಸ್ತಕಗಳಾದ ಕಂಬೇಯಂಡ ಡೀನಾ ಬೋಜಣ್ಣ ಅವರ ‘ಕೊಡವ ರಿಚುವಲ್ಸ್ ಅಂಡ್ ಟ್ರೆಡೀಷನ್ಸ್ ಎ ಸ್ಟಡಿ’, ಕುಪ್ಪಂಡ ಈಶ್ವರಿ ಅವರ ‘ಐಡೆಂಟಿಟಿ ಆಫ್ ಕೊಡಗು (ವಿತ್ ಸ್ಪೇಷಲ್ ರೆಫರೆನ್ಸ್ ಟು ಹಾಕಿ ಅಂಡ್ ಮಿಲಿಟರಿ ಟ್ರೆಡೀಷನ್’, ಡಾ. ಬೊಡುಕುಟ್ಟಡ ರಾಧಿಕ ಕುಟ್ಟಪ್ಪ ಅವರ ‘ಪನ್ನಂಗಾಲತಮ್ಮೆ ಮತ್ತು ಕೆಂಬಟ್ಟಿ ಸಮುದಾಯ ಆಚರಣೆ ಮತ್ತು ಅನನ್ಯತೆ’, ಚಂಗಂಡ ಪೊನ್ನಣ್ಣ ಅವರ ‘ಇನ್‍ಕ್ಲೂಷನ್ ಆಫ್ ಕೊಡವ ಲ್ಯಾಂಗ್ವೇಜ್ ಇನ್ ದಿ ಏಯ್ತ್ ಷೆಡ್ಯೂಲ್ ಆಫ್ ಇಂಡಿಯನ್ ಕಾನ್‍ಸ್ಟಿಟ್ಯೂಷನ್’, ಕೊಕ್ಕಂಡ ರಿನಿ ಚಿಣ್ಣಪ್ಪ ಅವರ ‘ಸರಿತಾ ಮಂದಣ್ಣಾಸ್ ಟೈಗರ್ ಹಿಲ್ಸ್’ ‘ವುಮೆನ್ ಇನ್ ರಿಸಿಸ್ಟೆನ್ಸ್’,  ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ‘ದಿ ಕಲ್ಚರ್ ಅಂಡ್ ಟ್ರ್ರೆಡೀಷನ್ ಆಫ್ ಕೊಡವಾಸ್’, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಅವರ ಕೆಂಗಳಮೆ ಕಿಗ್ಗಟ್ಟ್ ಮಾದೇವಡ ತಿರಿಕೆ’, ನಾಳಿಯಮ್ಮಂಡ ಅನಿತಾ ಕುಮಾರಿ ಅವರ  ‘ಕೊಡಗಿನ ನಾಟಿ ವೈದ್ಯರು’ ಹಾಗೂ ಡಾ.ನೆರವಂಡ ವೀಣಾ ಪೂಣಚ್ಚ, ಮಡೇಯಂಡ ಅಶ್ವ್ವಿನಿ ಶಶಿಧರ್, ಮಂದಪಂಡ ಶಶಿಕಲಾ ಅವರು ಜೊತೆಯಾಗಿ ರಚಿಸಿದ ‘ಗ್ಲಿಂಪ್ಸಸ್ ಆಫ್ ದಿ ಹಿಸ್ಟರಿ ಅಂಡ್ ಕಲ್ಚರ್ ಆಫ್ ಕೊಡಗು’ ಪುಸ್ತಕಗಳನ್ನು ಮತ್ತು ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ಪೊಂಗುರಿಯನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭ ಕೃತಿಕಾರರು ತಮ್ಮ ಅನಿಸಿಕೆ ವ್ಯಕಪಡಿಸಿದರು.

 ಅಕಾಡೆಮಿ ಮಾಜಿ ಅಧ್ಯಕ್ಷರಾದ ರಾಣಿ ಮಾಚಯ್ಯ, ಕಾರ್ಯಕ್ರಮದಲ್ಲಿ ಜಾನಕಿ ಮಾಚಯ್ಯ ಪ್ರಾರ್ಥಿಸಿದರು, ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಗಿರೀಶ್ ಸ್ವಾಗತಿಸಿದರು,  ತೇಲಪಂಡ ಕವನ್ ಕಾರ್ಯಪ್ಪ ನಿರೂಪಿಸಿದರು.