Header Ads Widget

Responsive Advertisement

2023ನೇ ಮಾರ್ಚ್ 31, ಎಪ್ರಿಲ್ 1 ಹಾಗೂ 2 ರಂದು ಚೆಟ್ಟಂಗಡ ಕಪ್ - 2023; ಕೇರ್ ಬಲಿಪ ನಮ್ಮೆ


2023ನೇ ಮಾರ್ಚ್ 31, ಎಪ್ರಿಲ್ 1 ಹಾಗೂ 2 ರಂದು ಚೆಟ್ಟಂಗಡ ಕಪ್ - 2023

ಟಿ.ಶೆಟ್ಟಿಗೇರಿಯಲ್ಲಿ 2ನೇ ವರ್ಷದ ಕೊಡವ ಒಕ್ಕಡೊಕ್ಕಡ ಕೇರ್ ಬಲಿಪ ನಮ್ಮೆ

ಶ್ರೀಮಂಗಲ: 2022ರಲ್ಲಿ ಆರಂಭವಾದ ಕೊಡವ ಒಕ್ಕಡೊಕ್ಕಡ ಕೇರ್ ಬಲಿಪ ನಮ್ಮೆ- ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟದ 2ನೇ ವರ್ಷದ ಪಂದ್ಯಾಟವನ್ನು 2023ನೇ ಮಾರ್ಚ್ 31, ಎಪ್ರಿಲ್ 1 ಹಾಗೂ 2 ರಂದು ಚೆಟ್ಟಂಗಡ ಕುಟುಂಬವು ಟಿ. ಶೆಟ್ಟಿಗೇರಿಯಲ್ಲಿ ನಡೆಸಲಿದೆ.

ಚೆಟ್ಟಂಗಡ ಕುಟುಂಬದ ಕಾರ್ಯದರ್ಶಿ ರವಿ ಸುಬ್ಬಯ್ಯರವರ ಅಧ್ಯಕ್ಷತೆಯಲ್ಲಿ ಚೆಟ್ಟಂಗಡ ಕುಟುಂಬದ ಐನ್'ಮನೆಯಲ್ಲಿ ಈ ಸಂಬಂಧ ಭಾನುವಾರ ನಡೆದ ಪ್ರಥಮ ಸಭೆಯಲ್ಲಿ ದಿನಾಂಕ ನಿಗಧಿಗೊಳಿಸಲಾಯಿತು. ಕೊಡವ ಕುಟುಂಬದ ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ವಿಭಾಗದ ಈ ಪಂದ್ಯಾವಳಿಯಲ್ಲಿ 300ಕ್ಕೂ ಹೆಚ್ಚು ಕೊಡವ ಕುಟುಂಬದ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. 

ಪುರುಷರ ಹಾಗೂ ಮಹಿಳೆಯರ ವಿಭಾಗದ ವಿಜೇತ  ತಂಡಗಳಿಗೆ ಪ್ರಥಮ 50 ಸಾವಿರ   ರೂ. ನಗದು ಹಾಗೂ ಟ್ರೋಫಿ, ದ್ವಿತೀಯ 30 ಸಾವಿರ ರೂ. ನಗದು ಹಾಗೂ ಟ್ರೋಫಿ, ತ್ರತೀಯ 20 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡುವಂತೆ ತೀರ್ಮಾನಿಸಲಾಯಿತು.

ಕೊಡವ ಒಕ್ಕಡೊಕ್ಕಡ ಕೇರ್ ಬಲಿಪ ನಮ್ಮೆ, ಚೆಟ್ಟಂಗಡ ಕಪ್ - 2023ನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಇಂದು ನಡೆದ ಸಭೆಯಲ್ಲಿ ಕ್ರೀಡಾಕೂಟಕ್ಕೆ ಕುಟುಂಬದ 40 ಸದಸ್ಯರ ಸಮಿತಿ ರಚಿಸಲಾಯಿತು. 2022 ಎಪ್ರಿಲ್ 23ರಂದು ಪ್ರಥಮವಾಗಿ ಕಕ್ಕಬೆ ಶಾಲಾ ಮೈದಾನದಲ್ಲಿ ಕೊಡವ ಒಕ್ಕಡೊಕ್ಕಡ ಕೇರ್ ಬಲಿಪ ನಮ್ಮೆ ನಡೆಸಿದ ಪೊನ್ನೋಲತಂಡ ಕುಟುಂಬಸ್ಥರಿಂದ ಚೆಟ್ಟಂಗಡ ಕುಟುಂಬವು ಕ್ರೀಡಾಕೂಟದ ಬಾವುಟ ಪಡೆದಿದ್ದು ಅತ್ಯುತ್ತಮ ರೀತಿಯಲ್ಲಿ ಚೆಟ್ಟಂಗಡ ಕಪ್  ಕೇರ್ ಬಲಿಪ ನಮ್ಮೆಯನ್ನು ನಡೆಸಲು ಕುಟುಂಬದ ಸದಸ್ಯರೆಲ್ಲರೂ ಕೈಜೋಡಿಸುವಂತೆಯೂ ಅತೀ ಹೆಚ್ಚು ಕೊಡವ ಕುಟುಂಬವು ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ಮಾಡಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.