“ಉತ್ಥಾನ” ಇದು ಕನ್ನಡ ಕಲಿಗಳ ಗುಣಗಾನ; ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಕನ್ನಡ ರಾಜ್ಯೋತ್ಸವ ಅಂಗವಾಗಿ “ಉತ್ಥಾನ” ಇದು ಕನ್ನಡ ಕಲಿಗಳ ಗುಣಗಾನ ಎಂಬ ಘೋಷವಾಕ್ಯಾದೊಂದಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿನಾಂಕ 10 ಗುರುವಾರದಂದು ಅದ್ದೂರಿಯಾಗಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಕವಿ, ಲೇಖಕರ ಹಾಗೂ ಸಂಗೀತಗಾರರಾದ ಹೆಚ್. ಡುಂಡಿರಾಜ್ ರವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿ ಕೊಡಗಿನಲ್ಲಿ ಈ ರೀತಿಯ ಅತೀ ವರ್ಣರಂಜಿತ ಕಾರ್ಯಕ್ರಮನ್ನು ಆಯೋಜಿಸಿರುವುದನ್ನು ಶ್ಲಾಘಿಸಿದರು. ನಂತರ ಮಾತನಾಡಿದ ಇವರು ಇಂತಹ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ವೈವಿದ್ಯಮಯವಾಗಿ ವಸ್ತು ಪ್ರದರ್ಶನದ ಮೂಲಕ ಆಯೋಜನೆ ಮಾಡಿರುವುದನ್ನು ತಮ್ಮ ಧಾಟಿಯಲ್ಲಿ ವರ್ಣಿಸಿ ತಮ್ಮ ಹಾಸ್ಯ, ಚುಟುಕು, ಹನಿಗವನಗಳ ಮೂಲಕ ನೆರೆದಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ರಂಜಿದರು.
ಹಾಗೆ, ಕನ್ನಡ ಭಾಷೆಯ ಶಕ್ತಿ, ಸಾಹಿತ್ಯ ಅದರ ವ್ಯಾಪ್ತಿಯನ್ನು ತಮ್ಮ ಕವನಗಳ ಮೂಲಕ ತಿಳಿಸುತ್ತಾ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ದೈನಂದಿನ ಚಟುವಟಿಕೆಗಳಲ್ಲಿ ಕನ್ನಡವನ್ನು ಮೈಗೂಡಿಸಿಕೊಂಡು ಕನ್ನಡವನ್ನು ಬೇಳೆಸಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಹೆಚ್. ಡುಂಡಿರಾಜ್ ರವರನ್ನು ಸನ್ನಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ವಿಶಾಲ್ ಕುಮಾರ್, ಮುಖ್ಯ ಆಡಳಿತಾಧಿಕಾರಿಗಳಾದ ಡಾ. ನಂಜುಂಡೇಗೌಡ, ಆರ್ಥಿಕ ಸಲಹೆಗಾರರಾದ ಆನಂದ, ಸಂಸ್ಥೆಯ ನಿರ್ದೆಶಕರಾದ ಡಾ. ಕೆ.ಬಿ, ಕಾರ್ಯಪ್ಪ ರವರು ಕನ್ನಡ ರಾಜ್ಯೋತ್ಸವದ ಬಗ್ಗೆ ಮಾತನಾಡಿದರು.
ಈ ಸಾಲಿನ ಕನ್ನಡ ರಾಜ್ಯೋತ್ಸವದ ವಿಷಯ ಕನಾ೯ಟಕವನ್ನು ಆಳಿದ ರಾಜಮನೆತನಗಳ ಬಗ್ಗೆ ಆಗಿದ್ದು ಇವರುಗಳ ಕೊಡುಗೆಯನ್ನು ಬಿಂಬಿಸುವ ಹಲವಾರು ಕಾಯ೯ಕ್ರಮಗಳನ್ನು ಆಯೋಜಿಸಲಾಗಿತ್ತು. ಕಲೆ, ಸಂಸ್ಕೃತಿ, ವಾಸ್ತುಶಿಲ್ಪಗಳ ಬಗ್ಗೆ ಅರಿವು ಮೂಡಿಸಲು ಬಿತ್ತಿ ಚಿತ್ರಗಳು, ಮಾಡೆಲ್‌ಗಳ ವಸ್ತು ಪ್ರದರ್ಶನವನ್ನು ನಡೆಸಲಾಯಿತು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ, ಹೊಯ್ಸಳರ ನಾಟಕ, ತೆನಾಲಿರಾಮ ನಾಟಕ, ಹುಲಿ ವೇಷ, ಉಮ್ಮತಾಟ್, ಕಂಸಾಳೆ ಹೀಗೆ ಹಲವಾರು ಸಾಂಸ್ಕೃತೀಕ ಕಾಯ೯ಕ್ರಮಗಳನ್ನು ಆಯೋಜಿಸಲಾಗಿತ್ತು ಹತ್ತು ದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೆಶಕರಾದ ಡಾ. ಕಾರ್ಯಪ್ಪ ಕೆ.ಬಿ, ಮುಖ್ಯ ಆಡಳಿತಾಧಿಕಾರಿಗಳಾದ ಡಾ. ನಂಜುಂಡೇಗೌಡ, ಪ್ರಾಂಶುಪಾಲರಾದ ಡಾ. ವಿಶಾಲ್ ಕುಮಾರ್, ಆರ್ಥಿಕ ಸಲಹೆಗಾರರಾದ ಆನಂದ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ ಜಯಲಕ್ಷ್ಮಿ ಪಾಟ್ಕರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ನಂಜುಂಡಯ್ಯ ಹಿರಿಯ ವೈದ್ಯರಾದ ಡಾ. ಪಾಟ್ಕರ್, ಕನ್ನಡ ಸಂಘದ ಪ್ರಮುಖರಾದ ಡಾ. ಶಾಶಂಕ ಎಂಜೆ, ಡಾ ಕುಶವಂತ್ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಎಂ.ಬಿ.ಬಿ.ಎಸ್, ನರ್ಸಿಂಗ್, ಅರೇ ವೈದ್ಯಕೀಯ ವಿದ್ಯಾರ್ಥಿಗಳು ಹಾಜರಿದ್ದರು.
"ಉತ್ಥಾ.ನ"ವು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆಯುತ್ತಿರುವ ಕನ್ನಡದ ಉತ್ಸವ. ನವೆಂಬರ್ ೧ ರಂದು ಉದ್ಘಾಟನೆಗೊಂಡ ಈ ಕಾಯ೯ಕ್ರಮವು ಸತತ 10 ದಿನಗಳ ಕಾಲ ಹಲವಾರು ಕ್ರೀಡಾ ಮತ್ತು ಸಾಹಿತ್ಯ ಸ್ಪಧೆ೯ಗಳಾದ ಅಂತ್ಯಾಕ್ಷರಿ, ಉಕ್ತಲೇಖನ, ಚಚಾ೯ ಸ್ಪಧೆ೯, ಹಾಸ್ಯೋತ್ಸವ, ಅನುವಾದ, ಅಣಕು ಪತ್ರಿಕಾಗೋಷ್ಠಿ, ರಸಪ್ರಶ್ನೆ, ನಲಿ-ನುಲಿ ನಾಲಿಗೆ, ಚಿತ್ರಕಲೆ, ಕವಿತೆ ರಚನೆ, ಲಗೋರಿ, ಸ್ಯಾಕ್ ರೇಸ್, ಕುಂಟುಮುಟ್ಟಾಟ, ನಾಯಿ ಮೂಳೆ, ಬುಗುರಿ, ಚಿನ್ನಿದಾಂಡು, ಚೌಕಾಬಾರ, ಚದುರಂಗದಿಂದ ಕೂಡಿತ್ತು. ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡಿ ಈ ಎಲ್ಲಾ ಸ್ಪಧೆ೯ಗಳನ್ನು ಏಪ೯ಡಿಸಲಾಗಿತ್ತು.
ಈ ಕಾಯ೯ಕ್ರಮಗಳಿಗೆ ಅತಿಥಿಗಳಾಗಿ ಡಾ ಮನೋಹರ್ ಪಾಟ್ಕರ್, ಡಾ. ಸೂಯ೯ಕುಮಾರ್ ಹಾಗೂ ಅನಿಲ್. ಹೆಚ್. ಟಿ ರವರು ಆಗಮಿಸಿದ್ದರು. ಕೊಡಗು ವೈದ್ಯಕೀಯ ವಿಜ್ನಾನಗಳ ಸಂಸ್ಥೆಯಲ್ಲಿ 10 ದಿನಗಳ ಕಾಲ ನಡೆದ ರಾಜ್ಯೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಕೊನೆಗೊಂಡಿತು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network