Header Ads Widget

Responsive Advertisement

ಕೇಸರಿ ಯೂತ್ ಮೂವ್ ಮೆಂಟ್‌ನಿಂದ ಕ್ಯಾನ್ಸರ್ ಪೀಡಿತ ಪುಟ್ಟ ಬಾಲಕಿಗೆ ನೆರವು


ಕೇಸರಿ ಯೂತ್ ಮೂವ್ ಮೆಂಟ್‌ನಿಂದ ಕ್ಯಾನ್ಸರ್ ಪೀಡಿತ ಪುಟ್ಟ ಬಾಲಕಿಗೆ ನೆರವು

ಸಿದ್ಧಾಪುರದ ಕರಡಿಗೋಡಿನ ನೇತ್ರಾವತಿರವರ ಪುತ್ರಿ ಮೂರುವರೆ ವರ್ಷದ ಪುಟ್ಟ ಬಾಲಕಿ ಧನ್ಯ ಕ್ಯಾನ್ಸರ್ ಪೀಡಿತಳಾಗಿದ್ದು, ಅವಳ ಚಿಕಿತ್ಸಾ ಸಹಾಯಾರ್ಥವಾಗಿ ಸಿದ್ಧಾಪುರದ ಕೇಸರಿ ಯೂತ್ ಮೂವ್ ಮೆಂಟ್ ಸದಸ್ಯರು ಅಂಗಡಿಗಳು ಮತ್ತು ಮನೆಮನೆಗಳಿಗೆ ತೆರಳಿ ಸಂಗ್ರಹಿಸಿದ ಒಂದು ಲಕ್ಷದ ಮೂವತ್ತೇಳು ಸಾವಿರದ ಏಳುನೂರ ಅರವತ್ತು ರೂಪಾಯಿಗಳನ್ನು ಇಂದು ಕಾರ್ಯಕರ್ತರ ಸಮ್ಮುಖದಲ್ಲಿ ಮಗುವಿನ ತಾಯಿ ನೇತ್ರಾವತಿ ಮತ್ತು ಮಗುವಿನ ಕೈಗೆ ನೀಡಲಾಯಿತು.

ಇದೂ ಅಲ್ಲದೆ ಕೇಸರಿ ಯೂತ್ ಮೂವ್ ಮೆಂಟ್ ನ ಕರೆಗೆ ಸ್ಪಂದಿಸಿ ಸುಮಾರು ಅರವತ್ತು ಸಾವಿರದಷ್ಟು ಫೋನ್ ಪೇ ಮತ್ತು ಗೂಗಲ್ ಪೇ ಮೂಲಕವೂ ಸಂಗ್ರಹವಾಗಿದ್ದು ಎಲ್ಲಾ ಸೇರಿ ಒಟ್ಟು 2 ಲಕ್ಷದಷ್ಟು ಹಣದ ಸಹಾಯ ಮಾಡಲಾಯಿತು.

ಮಗುವಿನ ಚಿಕಿತ್ಸೆಗೆ ಉದಾರವಾಗಿ ದಾನ ನೀಡಿದ ಎಲ್ಲಾ ದಾನಿಗಳಿಗೂ ಕೇಸರಿ ಯೂತ್ ಮೂವ್ ಮೆಂಟ್ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದೆ.