Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗಿನ ಪತ್ರಕರ್ತ ರಾಜ್ ಕುಶಾಲಪ್ಪ ಗೆ ಪಿ .ವೆಂಕೋಬ ರಾವ್ ಪ್ರಶಸ್ತಿ


ಕೊಡಗಿನ ಪತ್ರಕರ್ತ ರಾಜ್ ಕುಶಾಲಪ್ಪ ಗೆ ಪಿ .ವೆಂಕೋಬ ರಾವ್ ಪ್ರಶಸ್ತಿ

ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಡಗು ಜಿಲ್ಲಾ ಶಾಖೆಯ ಅಧ್ಯಕ್ಷರಾದ ಕಿರಿಯಮಾಡ ರಾಜ್ ಕುಶಾಲಪ್ಪ ರವರಿಗೆ ಈ ಸಾಲಿನ ಪ್ರತಿಷ್ಟಿತ ಪಿ .ವೆಂಕೋಬ ರಾವ್ ಪ್ರಶಸ್ತಿ ಲಭಿಸಿದೆ.

ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೈಸೂರು  ಜಿಲ್ಲಾ ಶಾಖೆಯ ನೇತೃತ್ವದಲ್ಲಿ ಹುಣಸೂರು ಅಂಬೇಡ್ಕರ್ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಹುಣಸೂರು ತಾಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪವರ್ ಟಿವಿ ಯ  ಪ್ರಮುಖ ಸುದ್ದಿ ಸಂಪಾದಕರಾದ  ರಾಘವ ಸೂರ್ಯ ಅವರು ಈ ಸಾಲಿನ ಪ್ರತಿಷ್ಟಿತ ಪಿ .ವೆಂಕೋಬ ರಾವ್ ಪ್ರಶಸ್ತಿ ಪ್ರದಾನ ಮಾಡಿದರು.