ನಗರ ಸಭಾ ಅಧ್ಯಕ್ಷರಿಗೆ ಅವಮಾನ ಕೊಡವಾಮೆರ ಕೊಂಡಾಟ ಸಂಘಟನೆ ಖಂಡನೆ...
ಮಡಿಕೇರಿ ನಗರ ಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅವರ ಹೆಸರನ್ನು ಬೀಡಾಡಿ ದನವೊಂದರ ಮೇಲೆ ಬರೆದು ಅವಮಾನ ಮಾಡಿರುವುದನ್ನು ಕೊಡವಾಮೆರ ಕೊಂಡಾಟ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯು, ರಾಜಕೀಯ ತೀಟೆಗಾಗಿ ಒಬ್ಬ ಕೊಡವತಿಯ ಮೇಲೆ ವಿಕೃತಿ ಮೆರೆಯುವುದನ್ನು ನಾವು ಸಹಿಸುವುದಿಲ್ಲ. ನಾವು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಪರವಾಗಿಲ್ಲ. ಆದರೆ ಒಬ್ಬ ಕೊಡವತಿ ಅದರಲ್ಲೂ ಚುನಾಯಿತ ಜನ ಪ್ರತಿನಿಧಿ, ಮಡಿಕೇರಿ ನಗರದ ಪ್ರಥಮ ಪ್ರಜೆಗೆ ಮಾಡಿರುವ ಅವಮಾನ ಸಹಿಸಲಸಾಧ್ಯ. ಈಗಾಗಲೇ ಸಂಬಂಧಿಸಿದವರು ಪೊಲೀಸ್ ದೂರು ದಾಖಲಿಸಿದ್ದು, ಪೊಲೀಸ್ ಇಲಾಖೆ ತಕ್ಷಣ ಆರೋಪಿಯನ್ನು ಬಂದಿಸಿ ಮುಂದಾಗಬಹುದಾದ ಇಂತಹ ನೀಚ ಕೃತ್ಯ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು.
ಕೊಡವಾಮೆರ ಕೊಂಡಾಟ ಸಂಘಟನೆಯು ಈ ವಿಚಾರದಲ್ಲಿ ಅನಿತ ಪೂವಯ್ಯ ಅವರ ಬೆನ್ನಿಗೆ ನಿಂತು ಅವರ ಮುಂದಿನ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಲಿದೆ.
ಮುಂದೆಯೂ ಕೂಡ ಕೊಡವ ನಾಯಕರ ಮೇಲೆ ವೈಯುಕ್ತಿಕ ತೇಜೋವಧೆ ಮಾಡುವವರು ಎಚ್ಚರಿಕೆಯಿಂದ ಇರಬೇಕು. ನಾವೂ ಪ್ರತಿಕ್ರಿಯೆ ನೀಡಲು ಪ್ರಾರಂಭಿಸಿದರೆ ಮುಂದೇನಾಗಬಹುದು ಎನ್ನುವುದನ್ನು ಊಹಿಸಿಕೊಂಡು, ಪೋಲೀಸ್ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಂದು ಸಂಘಟನೆ ಆಗ್ರಹಿಸಿದೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network