ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ಜನವರಿ, 15 ರಂದು ನಡೆಯುವ ರಾಷ್ಟ್ರೀಯ ಯುವ ಸಪ್ತಾಹ ಪ್ರಯುಕ್ತ ಜಿಲ್ಲೆಯಲ್ಲಿ ಯೋಗಥಾನ್ ಕಾರ್ಯಕ್ರಮ ನಡೆಯಲಿದೆ.
ಮಡಿಕೇರಿ ಸಾಯಿ ಹಾಕಿ ಟರ್ಫ್, ಪೊನ್ನಂಪೇಟೆ ಹಾಕಿ ಟರ್ಫ್(ಜೂನಿಯರ್ ಕಾಲೇಜು ಮೈದಾನ) ಹಾಗೂ ಕೂಡಿಗೆ ಕ್ರೀಡಾ ಶಾಲೆ ಹಾಕಿ ಟರ್ಫ್‍ಗಳಲ್ಲಿ ಯೋಗಥಾನ್ ನಡೆಯಲಿದೆ.
ಯೋಗ ಅಭ್ಯಾಸವು ಜನವರಿ, 12 ಮತ್ತು 13 ರಂದು ಎಲ್ಲಾ ಶಾಲೆಗಳು, ಕಾಲೇಜುಗಳಲ್ಲಿ ತಮ್ಮ ದೈಹಿಕ ಶಿಕ್ಷಣ ಶಿಕ್ಷಕರು/ ಯೋಗ ಬೋಧಕರ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಲಿದ್ದಾರೆ.
ಜನವರಿ, 14 ರಂದು ಬೆಳಗ್ಗೆ 9 ಗಂಟೆಗೆ ಮಡಿಕೇರಿ, ಪೊನ್ನಂಪೇಟೆ ಮತ್ತು ಕೂಡಿಗೆಯಲ್ಲಿ ಯೋಗ ಅಭ್ಯಾಸ ನಡೆಯಲಿದೆ. ಜನವರಿ 15 ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮಡಿಕೇರಿ, ಪೊನ್ನಂಪೇಟೆ ಮತ್ತು ಕೂಡಿಗೆಯಲ್ಲಿ ಯೋಗಥಾನ್ ನಡೆಯಲಿದೆ.
ಯೋಗದ ವಿವರಗಳಿಗೆ http://youtu.be/RgiLepPugrY ಲಿಂಕ್ ಅನ್ನು ಕ್ಲಿಕ್ ಮಾಡಿ ಪಡೆಯಬಹುದು. ಬಿಳಿ ಬಣ್ಣದ ಟಿ ಶರ್ಟ್ ಧರಿಸಿ ಯೋಗ ಮಾಡುವುದು. ಭಾಗವಹಿಸುವವರು ತಮ್ಮ ಸ್ವಂತ ಯೋಗ ಮ್ಯಾಟ್, ಜಮಖಾನ/ ಬೆಡ್‍ಶೀಟ್ ತರಬೇಕು. ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಗೆ ಭಾಗವಹಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ಕೋರಿದ್ದಾರೆ.
ಗ್ರ ಸುದ್ದಿ ಮಾಹಿತಿಯನ್ನು ಪಡೆಯಲು ಈಗಲೇ JOIN ಆಗಿ ಸರ್ಚ್ ಕೂರ್ಗ್ ಮೀಡಿಯಾ ನ್ಯೂಸ್ ಅಪ್ಡೇಟ್ಸ್ ವಾಟ್ಸಾಪ್ ಕಮ್ಯೂನಿಟಿಗೆ*
https://chat.whatsapp.com/KwaaZ7ZCQ18FRRNqiqJHPG