ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸ: ಮಡಿಕೇರಿ ಕ್ರೈಂ ಠಾಣೆ ಯಲ್ಲಿ ಕೇಸು ದಾಖಲು
ಕೆಲವು ದಿನಗಳ ಹಿಂದೆ ಗೋಣಿಕೊಪ್ಪಲಿನ ಬ್ಯಾಂಕ್ ಆಫ್ ಬರೋಡ, ಎಸ್.ಬಿ.ಐ ಮತ್ತು ಹೆಚ್.ಡಿ. ಎಫ್.ಸಿ ಬ್ಯಾಂಕ್ ಖಾತೆ ಯಿಂದ ಗ್ರಾಹಕರೊಬ್ಬರ ಮೂರು ಲಕ್ಷ ನಲುವತ್ತೇಳು ರೂಪಾಯಿ ಹಣ ವನ್ನು ಹ್ಯಾಕರ್ಸ್ ಗಳು ಯು.ಪಿ.ಎ ಖಾತೆಯ ಮೂಲಕ ಪಡೆದು ಕೊಂಡಿದ್ದು, ಈ ಬಗ್ಗೆ
ಗ್ರಾಹಕರೊಬ್ಬರು ಆನ್ ಲೈನ್ ಮೂಲಕ ಫಾಮ್ ಪೆ ಎಂಬ ಆಪ್ ಮೂಲಕ ಹಣ ಪಡೆಯಲು ಕಸ್ಟಮರ್ ಕೇರ್ ನಲ್ಲಿ ನಂಬರ್ ಪಡೆದು ವಿಚಾರಿಸಿದಾಗ ಅವರು ಗ್ರಾಹಕರ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ. ಈ ಬಗ್ಗೆ ಕ್ರೈಂ ಪೋಲೀಸ್ ಹ್ಯಾಕರ್ಸ್ ಗಳ ಬ್ಯಾಂಕ್ ಖಾತೆ ಮಾಹಿತಿ ಪಡೆದಿದ್ದು, ಅವರು ಅಸ್ಸಾಂ, ವೆಸ್ಟ್ ಬೆಂಗಾಲ್.ಬಿಹಾರ್ ಮೂಲದವರು ಮತ್ತು ಅವರ ಬ್ಯಾಂಕ್ ಖಾತೆ ವಿವರ ಮತ್ತು ಅದರಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಮೊಬೈಲ್ ನಂಬರ್ ಪತ್ತೆ ಆಗಿದೆ.
ವರದಿ: ✍️.... ಎಂ.ಟಿ. ಕಾರ್ಯಪ್ಪ, ವಕೀಲರು, ಶ್ರೀಮಂಗಲ
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network