ತನ್ನ ಗುರುಗಳ ಸಹಕಾರದೊಂದಿಗೆ ಭತ್ತದ ತೆನೆಯಿಂದ ಭತ್ತವನ್ನು ಬೇರ್ಪಡಿಸುವ ಯಂತ್ರವನ್ನು ತಯಾರಿಸಿ ರಾಜ್ಯದುದ್ದಗಲಕ್ಕೂ ನಡೆದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿರುವ ಬಡವರ ಮನೆಯ ವಿದ್ಯಾರ್ಥಿನಿ .
ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ನಿವಾಸಿ ಕಾರ್ಮಿಕ ಶ್ರಮಜೀವಿ ಪಿ. ಶಿವಕುಮಾರ್ ರವರ ಪುತ್ರಿ ಮೆಘಾ ಎಸ್ ರವರು ಪ್ರಸ್ತುತ ಹಾಕತ್ತೂರಿನ ಪ್ರೌಢಶಾಲೆಯ ಹತ್ತನೇಯ ತರಗತಿಯ ವಿಧ್ಯಾರ್ಥಿನಿ.
ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಆನಂತರ
ಕುಶಾಲನಗರದಲ್ಲಿ ನಡೆದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮೊನ್ನೆಮೊನ್ನೆ ಧಾರವಾಡದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಎಂಟನೇಯ ಸ್ಥಾನವನ್ನು ಪಡೆದು ಇದೀಗ ಕೇರಳದ ತ್ರಿಶೂರ್ ನಲ್ಲಿ ನಡೆಯಲಿರುವ ದಕ್ಷಿಣ ವಿಭಾಗ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network