Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೂಡಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ತೆಂಗಿನ ಸಸಿಗಳು ಲಭ್ಯ

ಕೂಡಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ತೆಂಗಿನ ಸಸಿಗಳು ಲಭ್ಯ

ಕೂಡಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ದೃಢೀಕೃತ ತೆಂಗಿನ ಸಸಿಗಳು ಇಲಾಖಾ ದರದಲ್ಲಿ ರೈತರಿಗೆ ವಿತರಿಸಲು ಲಭ್ಯವಿರುತ್ತವೆ (ರೂ. 75 ರಂತೆ ಪ್ರತಿ ಸಸಿಗೆ). ಆಸಕ್ತ ರೈತರು ಪಹಣಿ ಹಾಗೂ ಆಧಾರ್ ಪ್ರತಿಯನ್ನು ನೀಡಿ, ಹಣವನ್ನು ಪಾವತಿಸಿ ಕ್ಷೇತ್ರದಿಂದ ತೆಂಗಿನ ಸಸಿಗಳನ್ನು ಖರೀದಿ ಮಾಡಬಹುದಾಗಿದೆ.

BPL ಕಾರ್ಡ್ ಮತ್ತು ನರೇಗಾ ಉದ್ಯೋಗ ಚೀಟಿ ಹೊಂದಿರುವ ರೈತರಿಗೆ ಖರೀದಿಸಿದ ತೆಂಗಿನ ಸಸಿಗಳನ್ನು ನಾಟಿ ಮಾಡಲು ನಿಯಮಾನುಸಾರ ಒಂದು ಎಕರೆಗೆ ಸರಿಸುಮಾರು 25,000 ರೂ. ಗಳ ಪ್ರೋತ್ಸಾಹ ಧನವನ್ನು  ನರೇಗಾ ಮುಖಾಂತರ ನೀಡಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದೆ.

ತೋಟಗಾರಿಕೆ ಸಹಾಯಕರು, ಕೂಡಿಗೆ ತೋಟಗಾರಿಕೆ ಕ್ಷೇತ್ರ - 8762937704