ಭಾಗಮಂಡಲ ತಲಕಾವೇರಿಯನ್ನು ಪ್ರವಾಸೋದ್ಯಮ ಪಟ್ಟಿಯಿಂದ ದೂರ ಇಡಿ: ಚಮ್ಮಟೀರ ಪ್ರವೀಣ್ ಉತ್ತಪ್ಪ
ಮಾನ್ಯ ಮುಖ್ಯಮಂತ್ರಿಗಳು #Siddaramaiah, ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರು #Pratap Simha ... ಕೊಡಗಿನ ಉಸ್ತುವಾರಿ ಸಚಿವರು #N.S bose raju, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು #A.S Ponnanna, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು #Mantar Gowda , ವಿಧಾನ ಪರಿಷತ್ ಸದಸ್ಯರು #suja kushalappa,
ಗೌರವಾನ್ವಿತರೇ...
ಕೊಡವ ಜನಾಂಗದ ಒಬ್ಬ ಪ್ರತಿನಿಧಿಯಾಗಿ ಹಾಗೂ ಕೊಡಗಿನ ಬಗ್ಗೆ ಕಾಳಜಿ ಇರುವ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಮತ್ತು ಒಬ್ಬ ಜವಾಬ್ದಾರಿಯುತ ಪತ್ರಕರ್ತನಾಗಿ ತಾವುಗಳಲ್ಲಿ ಅತೀ ವಿನಯದಿಂದ ಹಾಗೂ ಗೌರವಪೂರ್ವಕವಾಗಿ ವಿನಂತಿಸಿಕೊಳ್ಳವುದೇನೆಂದರೆ... ಕೊಡವರ ಕುಲದೇವತೆ ಹಾಗೂ ಕೊಡಗಿನ ಆರಾಧ್ಯ ದೇವತೆ ಮತ್ತು ಸಮಸ್ತ ಹಿಂದೂ ಜನಾಂಗದ ಮನೆ ಮನೆಗಳಲ್ಲಿ ಮನೆ ಮಾಡಿರುವ ಹಾಗೂ ಭಾರತ ದೇಶ ಮಾತ್ರವಲ್ಲ ಇಡೀ ಪ್ರಪಂಚದಲ್ಲಿಯೇ ಅಪಾರ ಭಕ್ತಿ ಸಮೂಹವನ್ನು ಹೊಂದಿರುವ ಪೂಜ್ಯ ದೇವತೆ, ವೇದಶ್ಲೋಕದಲ್ಲಿ ಸ್ಥಾನವನ್ನು ಪಡೆಯುವ ಮೂಲಕ ಪ್ರತಿನಿತ್ಯ ವಿಶ್ವದ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಆರಾಧಿಸಲ್ಪಡುವ ಜಲದೇವತೆ ತಾಯಿ ಕಾವೇರಿಯ ಪವಿತ್ರ ಪುಣ್ಯಕ್ಷೇತ್ರ ಕೊಡಗಿನಲ್ಲಿ ಇದೇ ಎನ್ನುವುದು ತಮಗೆಲ್ಲಾರಿಗೂ ತಿಳಿದಿರುವ ವಿಷಯ.
ಕೊಡವರಿಗೆ ಹಾಗೂ ಕೊಡಗಿನವರಿಗೆ ಕಾವೇರಿ ಕೇವಲ ನದಿಯಾಗಿ ಉಳಿದಿಲ್ಲ ಈಕೆ ಹರಿದಾಡುವ ಜಲದೇವತೆಯಾಗಿ ಮನೆಮನಗಳಲ್ಲಿ ತುಂಬಿಕೊಂಡು ಹೃದಯದಲ್ಲಿ ಪೂಜಿಸಲ್ಪಡುತ್ತಾಳೆ. ಅದರಲ್ಲೂ ಕೊಡವರು ಕಾವೇರಿ ಮಾತೆಯನ್ನು ತಮ್ಮ ಮನೆ ದೇವರಾಗಿ ಅಂದರೆ ಕುಲದೇವತೆ ಯಾಗಿ ಪೂಜಿಸುತ್ತಿದ್ದು, ಹುಟ್ಟಿನಿಂದ ಹಿಡಿದು ಸಾವಿನವರೆಗೂ ಮಾತ್ರವಲ್ಲ ಸತ್ತನಂತರವು ಮೋಕ್ಷಕ್ಕಾಗಿ ಹಾತೊರೆಯುತ್ತಾರೆ ಹಾಗೂ ಆರಾಧಿಸುತ್ತಾರೆ. ಹಾಗೆ ಇತರ ಜನಾಂಗ ಕೂಡಾ ತಮ್ಮನ್ನು ಆ ತಾಯಿಗೆ ಆರ್ಪಿಸಿಕೊಂಡಿದ್ದಾರೆ. ಹೀಗಿರುವಾಗ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರ ಕೊಡವರು ಹಾಗೂ ಹಿಂದೂಗಳ ಪಾಲಿಗೆ ಒಂದು ಪವಿತ್ರ ಪುಣ್ಯ ಕ್ಷೇತ್ರ ಹೊರತು ಪ್ರವಾಸಿತಾಣವಂತು ಅಲ್ಲವೇ ಅಲ್ಲಾ.
ಈ ಕ್ಷೇತ್ರಕ್ಕೆ ಅದರದೇಯಾದ ಕಟ್ಟುಪಾಡುಗಳಿಗೆ, ತನ್ನದೆಯಾದ ಪಾವಿತ್ರ್ಯತೆ ಇದೆ, ಮದ್ಯಮಾಂಸ ಸೇವಿಸಿ ಈ ಕ್ಷೇತ್ರಕ್ಕೆ ಕಾಲಿಟ್ಟರೇ ಅದು ಅಪವಿತ್ರ ಎನ್ನುವ ನಂಬಿಕೆ ನಮ್ಮದು. ಮೋಜು ಮಸ್ತಿಗಾಗಿ ಈ ಕ್ಷೇತ್ರಕ್ಕೆ ಬಂದರೆ ಅದು ಅಪವಿತ್ರ ಎನ್ನುವ ಭಾವನೆ ನಮ್ಮದು. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಪ್ರವಾಸಿಗರು ಭಕ್ತರಾಗಿ ಬೇಟಿನೀಡದೆ ಪ್ರವಾಸಿ ಕ್ಷೇತ್ರವಾಗಿ ಭೇಟಿ ನೀಡಿ ಕ್ಷೇತ್ರದ ಪಾವಿತ್ರ್ಯತೆಗೆ ದಕ್ಕೆ ತೋರುತ್ತಿರುವುದು ನಮ್ಮ ಮನಸಿಗೆ ತುಂಬಾ ನೋವು ತಂದಿದೆ. ಅನ್ಯಧರ್ಮಿಯರು ಈ ಕ್ಷೇತ್ರದ ಮಹಿಮೆಯನ್ನು ಅರಿತು ಭಕ್ತಿಭಾವದಿಂದ ಕ್ಷೇತ್ರದ ಕಟ್ಟುಪಾಡುಗಳಿಗೆ ಪೂರಕವಾಗಿ ಭಯಭಕ್ತಿಯಿಂದ ಭೇಟಿನೀಡಿ ಪೂಜೆ ಮಾಡಿಸಿಕೊಂಡು ಹೋದರೆ ನಮದ್ದು ಯಾವುದು ಅಭ್ಯಂತರವಿಲ್ಲ, ಆದರೆ ಕೇವಲ ಸೈಡ್ ಸೀನ್ ನೋಡಲು ಮೋಜು ಮಸ್ತಿಗಾಗಿ ಬಂದು ಹೋಗುವುದು ನಮ್ಮಗಳ ಧಾರ್ಮಿಕ ಭಾವನೆಗಳಿಗೆ ನೋವು ತಂದಿದೆ. ಹಾಗೇ ಸ್ವಧರ್ಮಿಯರು ಕೂಡ ಈ ಕ್ಷೇತ್ರಕ್ಕೆ ಪ್ರವಾಸಿಗರಾಗಿ ಬಂದು ಕ್ಷೇತ್ರದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿರುವುದು ನಮ್ಮ ಮನಸ್ಸನ್ನು ಘಾಸಿಗೊಳಿಸುತ್ತಿದೆ.
ಇದೆಲ್ಲಾದಕ್ಕೂ ಒಂದೇ ಪರಿಹಾರವೆಂದರೆ, ದಯವಿಟ್ಟು ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರವನ್ನು ಪ್ರವಾಸೋದ್ಯಮ ಪಟ್ಟಿಯಿಂದ ಹೊರಗಿಡಿ. ಈ ಕ್ಷೇತ್ರವನ್ನು ಪ್ರವಾಸೋದ್ಯಮ ಪಟ್ಟಿಯಿಂದ ಹೊರಗಿಟ್ಟು ಒಂದು ಪವಿತ್ರ ಪುಣ್ಯಕ್ಷೇತ್ರವಾಗಿ ಮಾಡಲು ಇಂದಿನಿಂದಲೇ ಪಣತೊಡಬೇಕಿದೆ. ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರವನ್ನು ಟೆಂಪಲ್ ಟೌನ್ ವ್ಯಾಪ್ತಿಗೆ ಒಳಪಡಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದಂತೆ ಪಾವಿತ್ರ್ಯತೆ ಕಾಪಾಡಲು ಅನುವುಮಾಡಿಕೊಡಬೇಕಾಗಿದೆ. ಈಗಾಗಲೇ ಕಾವೇರಿ ಮುನಿಸಿಕೊಂಡಿದ್ದಾಳೆ ಎನ್ನುವುದಕ್ಕೆ ನಿದರ್ಶನವಾಗಿ ಕೊಡಗಿನಲ್ಲಿ ಈ ಬಾರಿ ಮಳೆಯ ಪ್ರಮಾಣ ತೀವ್ರ ಕಡಿಮೆಯಾಗಿದೆ, ಕೊಡಗು ಮಾತ್ರವಲ್ಲ ಕಾವೇರಿ ಹರಿಯುವ ಪ್ರದೇಶ ಬತ್ತಿ ಬರಡಾಗುವ ಮುನ್ನಾ ಮಾತೆಯ ಕ್ಷೇತ್ರದಲ್ಲಿ ಪಾವಿತ್ರ್ಯತೆಗೆ ಒತ್ತುಕೊಡಿ. ನಿಮಗಳಿಗೆ ಕಾವೇರಿಯ ಮೇಲೆ ಭಕ್ತಿಭಾವ ಇಲ್ಲದಿದ್ದರೂ ಚಿಂತೆ ಇಲ್ಲೆ ಕಾವೇರಿಯನ್ನು ಮನೆ ಮನೆಗಳಲ್ಲಿ ಆರಾಧಿಸುವ ಭಕ್ತರ ಭಾವನೆಗಳಿಗೆ ಬೆಲೆಕೊಡುತ್ತಿರೆಂದು ನಂಬಿ ಈ ತೆರೆದ ಪತ್ರವನ್ನು ಬರೆಯುತ್ತಿದ್ದೇನೆ.
ವಂದನೆಗಳೊಂದಿಗೆ
✍️ #ಚಮ್ಮಟೀರ ಪ್ರವೀಣ್ ಉತ್ತಪ್ಪ
ಅಧ್ಯಕ್ಷ: ಅಖಿಲ ಕೊಡವ ಸಮಾಜ ಯೂತ್ ವಿಂಗ್
📲9880967573
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network