Header Ads Widget

ಸರ್ಚ್ ಕೂರ್ಗ್ ಮೀಡಿಯ

ಎಡಪಾಲದಲ್ಲಿ ಮುಅಲಿಂ ಡೇ

ಎಡಪಾಲದಲ್ಲಿ ಮುಅಲಿಂ ಡೇ

ಎಡಪಾಲದ ನಜ್ಮುಲ್ ಹುದಾ ಮದರಸದ "ಮುಅಲಿಂ ಡೇ" ಕಾರ್ಯಕ್ರಮ ಎಡಪಾಲ ಜುಮಾ ಮಸೀದಿಯಲ್ಲಿ ಯಶಸ್ವಿಯಾಗಿ ಜರುಗಿತು.

ದ್ವಜಾರೋಹಣವನ್ನು ಪೊಯಾಪಳ್ಳಿ ಜುಮಾ ಮಸೀದಿಯ ಅಧ್ಯಕ್ಷ ಕೆ.ಯು.ಶಾಫಿ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬೂಬಕ್ಕರ್ ಮುಸ್ಲಿಯಾರ್ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರು ಹಾಗೂ ಕೊಡಗು ಜಿಲ್ಲಾ ನಾಇಬ್ ಖಾಝಿಗಳಾದ ಅಬ್ದುಲ್ಲ ಫೈಝಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನೌಫಲ್ ಹುದವಿ ಮುಅಲಿಂ ಡೇ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದಕ್ಕೂ ಮೊದಲು ಎಡಪಾಲ ಜುಮಾ ಮಸೀದಿ ಮುದರ್ರಿಸ್ ನಿಝಾರ್ ಫೈಝಿ ನೇತೃತ್ವದಲ್ಲಿ ಅಂಡತ್ ಮಾನಿ ದರ್ಗಾ ಹಾಗೂ ಸಮೀಪದ ಖಬರ್ ಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್,ಎನ್ ಎಚ್ ವೈಎ ಅಧ್ಯಕ್ಷ ರಿಯಾಝ್, ಮದರಸ ಅಧ್ಯಾಪಕರು, ಮತಿತ್ತರರು ಉಪಸ್ಥಿತರಿದ್ದರು.

ಸ್ವಾಗತ ಹಾಗೂ ವಂದನೆಯನ್ನು ಸದರ್ ಮುಅಲಿಂ ಹಮೀದ್ ಮುಸ್ಲಿಯಾರ್ ನೆರವೇರಿಸಿದರು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ