Header Ads Widget

ಸರ್ಚ್ ಕೂರ್ಗ್ ಮೀಡಿಯ

ಮೂನಾ೯ಡು ಪದವಿ ಕಾಲೇಜಿನ ಶ್ರೀರಕ್ಷಾಳಿಗೆ ರೋಟರ್ಯಾಕ್ಟ್ ನವರತ್ನ ಪ್ರಶಸ್ತಿ

ಮೂನಾ೯ಡು ಪದವಿ ಕಾಲೇಜಿನ ಶ್ರೀರಕ್ಷಾಳಿಗೆ ರೋಟರ್ಯಾಕ್ಟ್ ನವರತ್ನ ಪ್ರಶಸ್ತಿ

ಮೂನಾ೯ಡು ಪದವಿ ಕಾಲೇಜಿನ ರೋಟರ್ಯಾಕ್ಟ್ ನ ನಿಕಟಪೂವ೯ ಅಧ್ಯಕ್ಷೆ ಶ್ರೀರಕ್ಷಾ ಪ್ರಭಾಕರ್ ಅವರಿಗೆ ರೋಟರ್ಯಾಕ್ಟ್ ನವರತ್ನ -2023 ಎಂಬ ಪ್ರಶಸ್ತಿ ದೊರಕಿದೆ.

ಪುತ್ತೂರಿನಲ್ಲಿ ನಡೆದ ಜಿಲ್ಲಾ  ರೋಟರಾಕ್ಟ್ ಕ್ಲಬ್ ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೂರ್ನಾಡು ಪದವಿ ಕಾಲೇಜಿನ  ರೋಟರಾಕ್ಟ್ ಕ್ಲಬ್  ನ ನಿಕಟಪೂವ೯ ಅಧ್ಯಕ್ಷೆ ಶ್ರೀ ರಕ್ಷಾ ಪ್ರಭಾಕರ್ ಅವರಿಗೆ ರೋಟರಾಕ್ಟ್ ನ ನವರತ್ನ-2023 ಪ್ರಶಸ್ತಿಯನ್ನು ರೋಟರ್ಯಾಕ್ಟ್ ಜಿಲ್ಲಾ ಸಮಿತಿಯ ನಿಕಟಪೂವ೯  ಅಧ್ಯಕ್ಷ ನಿಖಿಲ್  ಆರ್.ಕೆ., ನೂತನ ಸಾಲಿನ  ಸಂಚಾಲಕ ಮಹಮ್ಮದ್ ಅಸ್ಲಂ   ಪ್ರಧಾನ ಮಾಡಿದರು.  ಶ್ರೀರಕ್ಷಾ ರೋಟರ್ಯಾಕ್ಟ್ ಅಧ್ಯಕ್ಷೆಯಾಗಿ ಕೈಗೊಂಡ ಅನೇಕ ಸಮಾಜಮುಖಿ ಕಾಯ೯ಗಳಿಗಾಗಿ ಈ ಪ್ರಶಸ್ತಿ ಲಭಿಸಿದೆ. ಈ ಹಿನ್ನಲೆಯಲ್ಲಿಯೇ ಶ್ರೀರಕ್ಷಾರನ್ನು  2023-24 ಸಾಲಿನ ಜಿಲ್ಲಾ ರೋಟರ್ಯಾಕ್ಟ್ ನ  ಸಾಂಸ್ಕೃತಿಕ ತಂಡದ ಅಧ್ಯಕ್ಷರಾಗಿ  ನೇಮಕಮಾಡಲಾಗಿದೆ.

ಮೂರ್ನಾಡು ಪದವಿ‌  ಕಾಲೇಜಿನ ರೋಟರಾಕ್ಟ್ ಕ್ಲಬ್  ನ  ಸಲಹೆಗಾರರಾಗಿ ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯ  ಸಂಪತ್ ಕುಮಾರ್, ವಸಂತ್‌ ಕುಮಾರ್, ಹರೀಶ್ ಕಿಗ್ಗಾಲು, ಎನ್.ಸಿ.ನವೀನ್, ಬೋಪಣ್ಣ ಕಾರ್ಯ‌ ನಿರ್ವಹಿಸುತ್ತಿದ್ದಾರೆ. ನಾಪೋಕ್ಲು ನಿವಾಸಿಯಾಗಿರುವ ಶ್ರೀರಕ್ಷಾ  ಪತ್ರಕತ೯  ಪಿ.ವಿ.  ಪ್ರಭಾಕರ್ ಮತ್ತು ಅಶ್ವಿನಿ ದಂಪತಿ ಪುತ್ರಿಯಾಗಿದ್ದಾಳೆ.