Header Ads Widget

ಸರ್ಚ್ ಕೂರ್ಗ್ ಮೀಡಿಯ

ನಗರ ಸಭೆ ಸದಸ್ಯ ಅಪ್ಪಣ್ಣ ಮೇಲೆ ಹಲ್ಲೆ, ಕೊಡವಾಮೆರ ಕೊಂಡಾಟ ಸಂಘಟನೆ ಖಂಡನೆ

ನಗರ ಸಭೆ ಸದಸ್ಯ ಅಪ್ಪಣ್ಣ ಮೇಲೆ ಹಲ್ಲೆ, ಕೊಡವಾಮೆರ ಕೊಂಡಾಟ ಸಂಘಟನೆ ಖಂಡನೆ

ಮಡಿಕೇರಿ ನಗರ ಸಭೆ  ಸದಸ್ಯ ಅಪ್ಪಣ್ಣ ಅವರ ಮೇಲೆ ಗುಂಪು ಹಲ್ಲೆ ಮಾಡಿರುವ ಕ್ರಮವನ್ನು ಕೊಡವಾಮೆರ ಕೊಂಡಾಟ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.  

ಆರೋಪಿಗಳ ವಿರುದ್ದ ತಕ್ಷಣ ಕಠಿಣ ಕ್ರಮ ಕೈಗೊಂಡು, ಮುಂದೆ ಜಿಲ್ಲೆಯಲ್ಲಿ ಇಂತ ಪ್ರಕರಣಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕಿದೆ.  ಒಬ್ಬ ನಗರಸಭಾ ಸದಸ್ಯನಿಗೇ ತನ್ನ ವಾರ್ಡ್ ವ್ಯಾಪ್ತಿಯಲ್ಲಿ ರಕ್ಷಣೆ ಇಲ್ಲದೆ ಗುಂಪು ಹಲ್ಲೆ ಆಗೋದಾದರೆ, ಸಾಮಾನ್ಯರ ಪಾಡೇನು ಎನ್ನುವುದನ್ನ ಯೋಚಿಸಬೇಕಿದೆ. 

ಕಾನೂನು ಸಂಬಂಧಿತ ಏನೇ ಭಿನ್ನಾಭಿಪ್ರಾಯ ಇದ್ದರೂ ಸಂಭಂದಿಸಿದ ಇಲಾಖೆಗಳ ಮೂಲಕ ಕಾನೂನಾತ್ಮಕವಾಗಿಯೆ ಕ್ರಮ ಜರುಗಿಸಬೇಕೇ ವಿನಹ, ಕಾನೂನು ಕೈಗೆತ್ತಿಕೊಳ್ಳುವುದಲ್ಲ. ಇತ್ತೀಚಿನ ದಿನಗಳಲ್ಲಿ ಮಡಿಕೇರಿ ಸೇರಿದಂತೆ ಕೊಡಗಿನ ನಾನಾ ಭಾಗಗಳಲ್ಲಿ ಪುಡಿ ರೌಡಿಗಳ ಹಾವಳಿ ಅಧಿಕವಾಗಿದ್ದು, ಪೊಲೀಸ್ ಇಲಾಖೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು. 

ಮುಂದಿನ ದಿನಗಳಲ್ಲಿ ಕ್ಷುಲ್ಲಕ ವಿಚಾರಗಳೇ ಬೇರೆ ಬೇರೆ ಆಯಾಮಗಳಿಗೆ ತಿರುವು ಪಡೆದುಕೊಂಡು, ಜಿಲ್ಲೆಯಲ್ಲಿ ಗೊಂದಲ ಮತ್ತು ಅಶಾಂತಿಯ ವಾತಾವರಣ ಸೃಷ್ಟಿಯಾಗುವುದನ್ನು ತಡೆಯಬೇಕಾದರೆ, ಪೋಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸುತ್ತದೆ.