ಮೂರ್ನಾಡು: ಇಲ್ಲಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಈಜು ತಜ್ಞ ಬಿ.ಆರ್. ಬಿಪಿನ್ ಅವರನ್ನು ಸನ್ಮಾನಿಸಲಾಯಿತು.
ಬಲಮುರಿ ಅಗಸ್ತೆಶ್ವರ ದೇವಸ್ಥಾನದ ಜಾತ್ರೆಯ ದಿನ ಬಲಮುರಿ ಕಾವೇರಿ ಹೊಳೆಯಲ್ಲಿ ಮುಳುಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವಾಸು ಅವರನ್ನು ರಕ್ಷಿಸಿದ ಬಿ.ಆರ್. ಬಿಪಿನ್ ಸಂಘದ ಸದಸ್ಯರು ಆಗಿರುತ್ತಾರೆ. ಇವರ ಸಾಹಸ ಕಾರ್ಯಕ್ಕೆ ಸಂಘದ ವತಿಯಿಂದ ಶಾಲು ಹೊದಿಸಿ ಫಲ-ತಾಂಬೂಲ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕರವಂಡ ಸಜನ್ ಗಣಪತಿ, ಉಪಾಧ್ಯಕ್ಷ ಅಶ್ವಥ್ ರೈ, ಕಾರ್ಯದರ್ಶಿ ಎನ್.ಎನ್. ಶರಣು, ಖಜಾಂಚಿ ಹೆಚ್.ಹೆಚ್. ಜಯಂತ್ ಕುಮಾರ್, ಸಹ ಕಾರ್ಯದರ್ಶಿ ದಿನೇಶ್ ರೈ ಹಾಗೂ ಸಂಘದ ಸದಸ್ಯರು ಹಾಜರಿದ್ದರು.
ಚಿತ್ರ ಮತ್ತು ವರದಿ: ಟಿ.ಸಿ. ನಾಗರಾಜ್, ಮೂರ್ನಾಡು
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network