Header Ads Widget

ಸರ್ಚ್ ಕೂರ್ಗ್ ಮೀಡಿಯ

ಮೂರ್ನಾಡುವಿನಲ್ಲಿ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದಿಂದ ಆಯುಧ ಪೂಜಾ ಸಂಭ್ರಮಾಚರಣೆಗೆ ಸಿದ್ದತೆ

ಮೂರ್ನಾಡು: ಇಲ್ಲಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮವು ಬಹಳ ಅದ್ಧೂರಿಯಿಂದ ನಡೆಯಲಿದೆ. 

ಮೂರ್ನಾಡಿನ ಪಾಂಡಾಣೆ ಶಾಲಾ ಮೈದಾನದಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ಅಲಂಕೃತ ವೇದಿಕೆಯಲ್ಲಿ 31ನೇ ವರ್ಷದ ಆಯುಧ ಪೂಜಾ ಸಂಭ್ರಮಾಚರಣೆ ಹಲವಾರು ಕಾರ್ಯಕ್ರಮಗಳ ವೈವಿಧ್ಯತೆಯೊಂದಿಗೆ ದಿನಾಂಕ 11ರ ಶುಕ್ರವಾರದಂದು ನಡೆಯಲಿದೆ.

ಮೂರ್ನಾಡು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಯೋಜಿಸಲಾಗಿರುವ ವಿಜೃಂಭಣೆಯ ಆಯುಧ ಪೂಜಾ ಕಾರ್ಯಕ್ರಮವು ಅಪರಾಹ್ನ 2.00 ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆಯೊಂದಿಗೆ ಪ್ರಾರಂಭಗೊಳ್ಳುತ್ತದೆ. ನಂತರ ಮುಖ್ಯ ರಸ್ತೆಯಲ್ಲಿ ಅಲಂಕೃತ ವಾಹನಗಳ ಮೆರವಣಿಗೆ ನಡೆಯಲಿದ್ದು ಮೆರವಣಿಗೆ ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ನೆರೆದಿರುತ್ತಾರೆ. ಮೆರವಣಿಗೆಯಲ್ಲಿ ಅಲಂಕೃತ ವಾಹನಗಳೊಂದಿಗೆ ಈ ಬಾರಿಯೂ ವಿಶೇಷವಾಗಿ ವಿಟ್ಲದ ರಸಿಕ ಆರ್ಟ್ಸ್ ಬೊಂಬೆ ಬಳಗದವರ ಬೊಂಬೆ ಕುಣಿತ ಮತ್ತು ವಾದ್ಯಗೋಷ್ಟಿ ಮೆರವಣಿಗೆಯ ಕಳೆಯನ್ನು ಮತ್ತಷ್ಟು ಹೆಚ್ಚಿಸಲಿದೆ.


ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಕರವಂಡ ಕೆ. ಸಜನ್ ಗಣಪತಿ ವಹಿಸಲಿದ್ದು, ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ, ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಶನ್ ರೈ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಚಂದ್ರಮೌಳಿ, ವಿರಾಜಪೇಟೆ ಆಶೀರ್ವಾದ್ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ಗೌರವ್ ಅಯ್ಯಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ.ಎಸ್. ರೇಖಾ ಬಾಲು, ಪಿಡಬ್ಲುö್ಯಡಿ ಇಲಾಖೆಯ ಕೋಳುಮಾಡಂಡ ಮಣಿ ಚಂಗಪ್ಪ, ಮೂರ್ನಾಡು ಹಿಂದೂ ರುದ್ರಭೂಮಿ ಅಧ್ಯಕ್ಷ ಬಿ.ಎಸ್. ಅರುಣ್ ರೈ, ಸಂಘದ ಗೌರವಾಧ್ಯಕ್ಷ ಎನ್.ಕೆ. ಕುಂಞಂರಾಮ, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ. ಬಾಬು, ಬಂಟರ ಸಂಘದ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್ ರೈ, ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಮುಂಡAಡ ಪವಿ ಸೋಮಣ್ಣ, ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ, ಮೂರ್ನಾಡು ಮುಸ್ಲಿಂ ಜಮಾಅತ್‌ನ ಅಧ್ಯಕ್ಷ ಕೆ.ಎ. ಅಬ್ದುಲ್ ಮಜೀದ್, ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಬಿ.ಎಸ್. ಪುಷ್ಪಾವತಿ, ಗೌಡ ಸಮಾಜ ಅಧ್ಯಕ್ಷ ಪಾಣತ್ತಲೆ ಟಿ. ಹರೀಶ್, ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ಆರೋಗ್ಯ ಕಾರ್ಯಕರ್ತೆ ಬೊಟ್ಟೋಳಂಡ ಕಾವೇರಮ್ಮ ನಾಣಯ್ಯ, ಅಯ್ಯಪ್ಪ ಯುವಕ ಮಂಡಳಿಯ ಅಧ್ಯಕ್ಷ ಕಂಬೀರAಡ ಕೆ. ಸತೀಶ್ ಮುತ್ತಪ್ಪ, ಮೂರ್ನಾಡು ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು ಭಾಗವಹಿಸಲಿದ್ದಾರೆ. 

ಸಭಾ ಕಾರ್ಯಕ್ರಮದಲ್ಲಿ ಮರಗೋಡು ಮಾಜಿ ಸೈನಿಕ, ಫೀ.ಮಾ. ಜ. ಕೆ.ಎಂ. ಕಾರ್ಯಪ್ಪ ರಾಜ್ಯ ಪ್ರಶಸ್ತಿ ವಿಜೇತರಾದ ಕ್ಯಾಪ್ಟನ್ ಹೊಸೊಕ್ಲು ಚಿಣ್ಣಪ್ಪ, ನಿವೃತ್ತ ದೈಹಿಕ ಶಿಕ್ಷಕ ಚೆಯ್ಯಂಡ ರಘು ತಿಮ್ಮಯ್ಯ ಹಾಗೂ ನಿವೃತ್ತ ಪೊಲೀಸ್ ಉಪನಿರೀಕ್ಷರಾದ ಕೆ.ಎಂ. ಸದಾಶಿವ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಗುವುದು. ಅಲಂಕೃತಗೊAಡ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಆರು ಚಕ್ರ ವಾಹನಗಳು ಮತ್ತು ಅಂಗಡಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಸಾರ್ವಜನಿಕರಿಗೆ ರಾತ್ರಿ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಸಂಘದ ವತಿಯಿಂದ ಮಾಡಲಾಗಿದೆ. ರಾತ್ರಿ ೮-೩೦ ಗಂಟೆಯಿAದ ಭದ್ರಾವತಿ ಬ್ರರ‍್ಸ್ ಆರ್ಕೆಸ್ಟಾç ಮತ್ತು ಇವೆಂಟ್ಸ್ಗಳು ಆಗಮಿಸುವ ಜನರ ಮನ ತಣಿಸಲಿದೆ. ಸಂಘದ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ವರದಿ: ಟಿ.ಸಿ. ನಾಗರಾಜ್, ಮೂರ್ನಾಡು.